Mysore
27
overcast clouds

Social Media

ಗುರುವಾರ, 27 ಆಗಸ್ಟ್ 2026
Light
Dark

ಗ್ಯಾಂಗ್ರಿನ್‌ನಿಂದ ಬಳಲುತ್ತಿದ್ದ ಬಾಲಣ್ಣ ಆನೆಯ ಕಿವಿ ಕತ್ತರಿಸಿದ ವೈದ್ಯರು

ಶಿವಮೊಗ್ಗ: ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದ ಬಾಲಣ್ಣ ಆನೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅದರ ಬಲಕಿವಿಯಲ್ಲಿ ಗ್ಯಾಂಗ್ರಿನ್‌ ಸೋಂಕು ಉಂಟಾಗಿದೆ. ಇದರಿಂದಾಗಿ ವೈದ್ಯರು ಆನೆಯ ಕಿವಿ ಕತ್ತರಿಸಿ ತೆಗೆದು ಚಿಕಿತ್ಸೆ ನೀಡುತ್ತಿದ್ದಾರೆ.

ಗ್ಯಾಂಗ್ರಿನ್‌ನಿಂದಾಗಿ ಬಾಲಣ್ಣ ಆನೆಯ ಬಲ ಕಿವಿ ಸಂಪೂರ್ಣ ಕಪ್ಪಗಾಗಿ ಕ್ಯೂ ಸೋರುತ್ತಿತ್ತು. ಈ ಹಿನ್ನೆಲೆಯಲ್ಲಿ ಗ್ಯಾಂಗ್ರಿನ್‌ ಸೋಂಕಿನಿಂದಾಗಿ ಕಿವಿಯ ಭಾಗವನ್ನು ವೈದ್ಯರು ಕತ್ತರಿಸಿ ತೆಗೆದಿದ್ದಾರೆ.

ಇದನ್ನು ಓದಿ: ಅನಾರೋಗ್ಯಕ್ಕೀಡಾಗಿದ್ದ ಹುಲಿ ಸೆರೆ: ಚಿಕಿತ್ಸೆಗಾಗಿ ಮೈಸೂರಿನ ಮೃಗಾಲಯಕ್ಕೆ

ಈ ಹಿನ್ನೆಲೆಯಲ್ಲಿ ಆನೆಗೆ ತುರ್ತು ಚಿಕಿತ್ಸೆ ನೀಡಲು ಬೆಂಗಳೂರಿನಿಂದ ಸಕ್ರೆಬೈಲು ಆನೆ ಶಿಬಿರಕ್ಕೆ ಬಂದಿದ್ದ ಡಾ.ಬೆಟ್ಟಿಯಷ್ಟ, ಡಾ.ರಮೇಶ್‌ ಸೇರಿದಂತೆ ಐವರು ವೈದ್ಯರ ತಂಡ, ಆನೆ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ಆರಂಭಿಸಿದ್ದಾರೆ.

ಬಾಲಣ್ಣ ಆನೆಗೆ ಸೋಂಕು ತೀವ್ರವಾಗಿತ್ತು. ಅಲ್ಲದೇ ಗ್ಯಾಂಗ್ರಿನ್‌ ಆನೆ ದೇಹದ ಇತರ ಭಾಗಗಳಿಗೆ ಹರಡುವುದನ್ನು ತಡೆಯಲು ಆನೆಯ ಬಲಕಿವಿಯನ್ನು ಕತ್ತರಿಸಿ ತೆಗೆಯಲಾಗಿದೆ.

Tags:
error: Content is protected !!