Mysore
25
few clouds

Social Media

ಮಂಗಳವಾರ, 13 ಅಕ್ಟೋಬರ್ 2026
Light
Dark

ಓದುಗರ ಪತ್ರ: ಮ್ಯಾನ್‌ಹೋಲ್ ಸರಿಪಡಿಸಿ

ವಿಜಯನಗರಕ್ಕೆ ಹೋಗುವ ರಸ್ತೆಯಲ್ಲಿ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ಮಹಾದ್ವಾರದ ಎದುರಗಡೆ ರಸ್ತೆಯ ಅಂಚಿಗೆ ಸೇರಿದಂತಿರುವ ಮ್ಯಾನ್ ಹೋಲ್‌ನಿಂದ ಹೊಲಸು ನೀರು ರಸ್ತೆಯಲ್ಲಿ ಹರಿಯುತ್ತಿದೆ.

ಮ್ಯಾನ್ ಹೋಲ್‌ನಿಂದ ಉಕ್ಕುತ್ತಿರುವ ಗಲೀಜಿನ ಜೊತೆಗೆ, ಹರಿಯುವ ನೀರಿನ ಮೇಲೆ ರಭಸದಿಂದ ಸಾಗುವ ವಾಹನಗಳಿಂದಾಗಿ, ರಸ್ತೆಯ ಇಕ್ಕೆಲಗಳಲ್ಲಿ ನಡೆದಾಡುವ ಜನರಿಗೆ, ವಿದ್ಯಾರ್ಥಿಗಳಿಗೆ ಗಲೀಜಿನಸಿಂಚನವಾಗುತ್ತಿದೆ. ಹಾಗೆಯೇ ಮೂಗು ಮುಚ್ಚಿಕೊಂಡು ನಡೆದಾಡಬೇಕಾದ ಸ್ಥಿತಿ ಇದೆ. ಕೂಡಲೇ ಸಂಬಂಧಿಸಿದ ಪಾಲಿಕೆ ಅಧಿಕಾರಿಗಳು ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಿ.

 – ವಿಜಯ್ ಹೆಮ್ಮಿಗೆ, ಮೈಸೂರು

Tags:
error: Content is protected !!