ಮಂಡ್ಯ: ನಾನು ಕೋವಿಡ್ ಹಗರಣದಲ್ಲಿ ಸಿಲುಕುವ ಪ್ರಮೇಯವೇ ಬರಲ್ಲ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
ಕೋವಿಡ್ ಹಗರಣ ಸಂಬಂಧ ಮಂಡ್ಯದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೋವಿಡ್-19 ಸಮಿತಿಯ ಮುಖ್ಯಸ್ಥನಲ್ಲ. ಆ ಸಮಿತಿಗೆ ಒಬ್ಬ ಸಲಹೆಗಾರ ಅಷ್ಟೆ. ನಾನು ಸಲಹೆಗಾರನಾಗಿ ಅಭಿಪ್ರಾಯ ಕೊಡುತ್ತಿದ್ದೆ ಅಷ್ಟೇ. ಈ ಹಗರಣದಲ್ಲಿ ಸಿಲುಕುವ ಪ್ರಮೇಯವೇ ಬರಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ನಿಮ್ಮ ವಿರುದ್ಧ ಬೆಡ್ ಖರೀದಿ ಬಗ್ಗೆ ಆರೋಪಗಳು ಕೇಳಿಬಂದಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ಸಮಿತಿಯಲ್ಲಿ ಅನೇಕ ತಜ್ಞರು ಹಾಗೂ ಇಲಾಖೆಗಳಿವೆ. ಹಾಗೇಯೇ ಅದು ಮೆಡಿಕಲ್ ಎಮರ್ಜೆನ್ಸಿ. ಪ್ರಪಂಚದಾದ್ಯಂತ ತುರ್ತು ಪರಿಸ್ಥಿತಿ ಇದ್ದ ಕಾರಣ ನಮ್ಮನ್ನು ಸ್ಪೆಷಲಿಸ್ಟ್ ಆಗಿ ನೇಮಕ ಮಾಡಿಕೊಂಡಿದ್ದರು ಅಷ್ಟೇ. ನಮಗೆ ನೇರ ಆಡಳಿತವಿರಲಿಲ್ಲ ಎಂದರು.





