ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣೆಯ ಮೊದಲ ಹಂತದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಹಿನ್ನಡೆ ಅನುಭವಿಸಿದ್ದರೆ, ಮೈತ್ರಿ ಅಭ್ಯರ್ಥಿ ನಿಖಿಲ್ ನಿಖಿಲ್ ಕುಮಾರಸ್ವಾಮಿಗೆ ಆರಂಭಿಕ ಮುನ್ನಡೆ ಪಡೆದುಕೊಂಡರು.
ಬಳಿಕ ದ್ವಿತೀಯ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಸಿಪಿವೈ ಆರನೇ ಸುತ್ತಿನಲ್ಲೂ ಭಾರಿ ಹಿನ್ನಡೆ ಅನುಭವಿಸಿದರು. ಈ ಲೆಕ್ಕಚಾರ ಏಳನೇ ಸುತ್ತಿನಲ್ಲಿ ಬದಲಾಯಿತು. ಏಳನೆ ಸುತ್ತಿನಲ್ಲಿ ಸಿಪಿವೈ 3663 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.