ಬೆಂಗಳೂರು : ಇತ್ತೀಚಿಗಷ್ಟೆ ಗೋಬಿ, ಕಾಟನ್ ಕ್ಯಾಂಡಿ ಹಾಗೂ ಕಬಾಬ್ ಗೆ ಬಳಸುವ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದ ಕಾರಣ ರಾಜ್ಯ ಸರ್ಕಾರ ಅವುಗಳಿಗೆ ಬಳಸುವ ಕೃತಕ ಬಣ್ಣವನ್ನು ಬ್ಯಾನ್ ಮಾಡಿತ್ತು. ಇದೀಗ ಪಾನಿಪುರಿಯಲ್ಲೂ ಕೂಡ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದ್ದು ಪಾನಿಪುರಿಗೆ ಬಳಸುವ ಕೃತಕ ಬಣ್ಣವು ಕೂಡ ಬ್ಯಾನ್ ಆಗುವ ಸಾಧ್ಯತೆ ಇದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿನ ಪಾನಿಪುರಿ ಮಾದರಿಗಳನ್ನ ಸಂಗ್ರಹಿಸಿ ಪರಿಶೀಲನೆ ನಡೆಸಿದೆ. ಪಾನಿಪುರಿಗೆ ಬಳಸುವ ಸಾಸ್, ಮೀಟಾ ಖಾರದ ಪುಡಿ ಸೇರಿದಂತೆ ಐದು ಬಗೆಯ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ. ಹೀಗಾಗಿ ಶೀಘ್ರದಲ್ಲೆ ಪಾನಿಪೂರಿಗೆ ಬಳಸುವ ಕ್ಯಾನ್ಸರ್ ಕಾರಕ ಅಂಶಗಳು ಬ್ಯಾನ್ ಮಾಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ.