Mysore
23
scattered clouds

Social Media

ಬುಧವಾರ, 07 ಅಕ್ಟೋಬರ್ 2026
Light
Dark

ಬ್ರಿಡ್ಜ್‌ ಮ್ಯಾನ್‌ ಖ್ಯಾತಿಯ ಪದ್ಮಶ್ರೀ ಡಾ.ಗಿರೀಶ್‌ ಭಾರದ್ವಾಜ್‌ ನಿಧನ

ಮಂಗಳೂರು: ತೂಗುಸೇತುವೆಗಳ ಸರದಾರ, ಸುಳ್ಯದ ವಿಶ್ವೇಶ್ವರಯ್ಯ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತ ಎಂಜಿನಿಯರ್‌ ಡಾ.ಗಿರೀಶ್‌ ಭಾರದ್ವಾಜ್‌ ಅವರು ಇಂದು ನಿಧನರಾಗಿದ್ದಾರೆ.

ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಗ್ರಾಮೀಣ ಭಾರತದ ಅಭಿವೃದ್ಧಿಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದ ಡಾ.ಗಿರೀಶ್‌ ಭಾರದ್ವಾಜ್‌ ಅವರು ದೇಶಾದ್ಯಂತ 140ಕ್ಕೂ ಹೆಚ್ಚು ತೂಗುಸೇತುವೆಗಳನ್ನು ನಿರ್ಮಿಸಿ ಲಕ್ಷಾಂತರ ಜನರ ಬದುಕಿಗೆ ಸಂಪರ್ಕ ಕಲ್ಪಿಸಿದ ಸಾಧಕರಾಗಿದ್ದರು.

Tags:
error: Content is protected !!