Mysore
30
few clouds

Social Media

ಭಾನುವಾರ, 09 ಫೆಬ್ರವರಿ 2025
Light
Dark

ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಲಾಯರ್‌ ಜಗದೀಶ್‌ ಬಂಧನ

ಬೆಂಗಳೂರು: ಕೊಡಿಗೆಹಳ್ಳಿ ಗಲಾಟೆ ಪ್ರಕರಣ ಸಂಬಂಧ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಲಾಯರ್‌ ಜಗದೀಶ್‌ ಹಾಗೂ ಗನ್‌ಮ್ಯಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ದೂರಿನ ಮೇರೆಗೆ ಲಾಯರ್‌ ಜಗದೀಶ್‌ ಹಾಗೂ ಗನ್‌ಮ್ಯಾನ್‌ನನ್ನು ಬಂಧಿಸಲಾಗಿದೆ.

ಗಲಾಟೆಯಲ್ಲಿ ಲಾಯರ್‌ ಜಗದೀಶ್‌ ಗಾಯಗೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಲೈವ್‌ಬಂದು ಮಾತನಾಡಿದ್ದರು. ಚಿಕಿತ್ಸೆ ಬಳಿಕ ಅವರ ಮಗ ಆರ್ಯನ್‌ ನನ್ನು ಸಹ ಬಂಧಿಸಲಾಗಿದೆ.

ಇಂದು ಲಾಯರ್‌ ಜಗದೀಶ್‌ ಅವರನ್ನು ನ್ಯಾಯಾಲಯದ ಮುಂದೆ ಪೊಲೀಸರು ಹಾಜರು ಪಡಿಸಲಿದ್ದಾರೆ. ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ಅಣ್ಣಮ್ಮ ದೇವಿಯ ಉತ್ಸವದ ವಿಚಾರವಾಗಿ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಲಾಯರ್‌ ಜಗದೀಶ್‌ ಹಾಗೂ ಸ್ಥಳೀಯರ ಮಧ್ಯೆ ಮಾರಾಮಾರಿಯಾಗಿತ್ತು.

ಈ ವೇಳೆ ಕಾನೂನು ಬಾಹಿರವಾಗಿ ಫೈರ್‌ ಮಾಡಿದ ಆರೋಪದ ಮೇರೆಗೆ ಬಂಧಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಬಳಸಲು ಮಾತ್ರ ಗನ್‌ ಲೈಸೆನ್ಸ್‌ ಪಡೆದಿದ್ದರು. ಆದರೆ ಗಲಾಟೆ ವೇಳೆ ಕಾನೂನು ಬಾಹಿರವಾಗಿ ಫೈರ್‌ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

Tags: