ಬೆಂಗಳೂರು: ರಾಜ್ಯದಲ್ಲಿ 2025-26ನೇ ಸಾಲಿನ ಬಜೆಟ್‌ಗೂ ಮುನ್ನವೇ ಬಿಯರ್ ದರವನ್ನು ರಾಜ್ಯ ಸರ್ಕಾರ ಏರಿಕೆ ಮಾಡಿದ್ದು, ಮದ್ಯಪ್ರಿಯರಿಗೆ ಬಿಗ್‌ಶಾಕ್ ನೀಡಿದೆ.
ಹೌದು! ಮದ್ಯಪ್ರಿಯರಿಗೆ ಜನಪ್ರಿಯ ಬ್ರ್ಯಾಂಡ್‌ಗಳಾದ ಲಜೆಂಡ್, ಪವರ್‌ಕೂಲ್, ಬ್ಲ್ಯಾಕ್ ಫೋರ್ಟ್ ಸೇರಿದಂತೆ ಅನೇಕ ಬಿಯರ್ ಬೆಲೆಗಳ 10 ರಿಂದ 45 ರೂಪಾಯಿಯವರೆಗೂ ರಾಜ್ಯ ಸರ್ಕಾರ ಏರಿಕೆ ಮಾಡಿದ್ದು, ಇಂದಿನಿಂದಲೇ(ಜನವರಿ.20) ಪರಿಷ್ಕೃತ ದರ ಜಾರಿಯಾಗಿದೆ. ಹೀಗಾಗಿ ಒಂದು ವರ್ಷದಲ್ಲಿ ರಾಜ್ಯ ಸರ್ಕಾರ ಮೂರನೇ ಬಾರಿಗೆ ಬಿಯರ್‌ಗಳ ದರ ಏರಿಕೆ ಮಾಡಿದೆ.
ಕಳೆದ ಆರು ತಿಂಗಳ ಹಿಂದೆಯಷ್ಟೇ ಆಮದು ವಸ್ತುಗಳ ಮೇಲೆ ಬೆಲೆ ಏರಿಕೆ ಆಗಿರುವ ಕಾರಣ, ಇದೀಗ ರಾಜ್ಯ ಸರ್ಕಾರ ಬಿಯರ್‌ಗಳ ಮೇಲಿನ ಸುಂಕವನ್ನು ಹೆಚ್ಚಳ ಮಾಡಿದೆ ಎಂದು ತಿಳಿಸಿದೆ. ಇನ್ನೂ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಮೇಲೆ ಒಟ್ಟು ಐದು ಬಾರಿ ಬಿಯರ್ ದರವನ್ನು ಏರಿಕೆ ಮದ್ಯಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.