Mysore
32
scattered clouds

Social Media

ಭಾನುವಾರ, 24 ಮೇ 2026
Light
Dark

ಭಟ್ಕಳ ದುರಂತ | ಕಪ್ಪೆ ಚಿಪ್ಪು ಆರಿಸಲು ಹೋಗಿದ್ದ 8 ಮಂದಿ ಸಾವು!

ನದಿಗೆ ಇಳಿದು ಕೊಚ್ಚಿ ಹೋದ ಕುಟುಂಬ

ಭಟ್ಕಳ : ಭಟ್ಕಳದಲ್ಲಿ ಚಪ್ಪೆಕಲ್ಲು ಆರಿಸಲು ಹೋಗಿದ್ದ ಒಂದೇ ಕುಟುಂಬದ 8 ಜನರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲ್ಲೂಕಿನ ಶಿರಾಲಿಯ ಅಳ್ವೆಕೋಡಿ ಸಮೀಪ ತಟ್ಟಿಹಕ್ಕಲ ತಳಿನಟ್ಟಿ ಹೊಳೆಯಲ್ಲಿ ಭಾನುವಾರ ನಡೆದಿದೆ.

ಎಂದಿನಂತೆ ನದಿ ಸಮುದ್ರ ತೀರಕ್ಕೆ ಕಪ್ಪೆ ಚಿಪ್ಪು ತರಲು ಕುಟುಂಬ ಮಕ್ಕಳು ಸೇರಿದಂತೆ 12 ಮಂದಿ ತೆರಳಿದ್ದಾರೆ. ದೊಡ್ಡ ಅಲೆಗೆ ಸಿಲುಕಿ 8 ಮಂದಿ ಕೊಚ್ಚಿ ಹೋಗಿದ್ದಾರೆ. ಇಬ್ಬರು ಪಾರಾಗಿದ್ದು, 8 ಮಂದಿ ಸಾವಿಗೀಡಾಗಿದ್ದಾರೆ. ಉಳಿದ ಇಬ್ಬರ ಹುಡುಕಾಟ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Tags:
error: Content is protected !!