Mysore
18
clear sky

Social Media

ಗುರುವಾರ, 22 ಜನವರಿ 2026
Light
Dark

ಸಚಿನ್‌ ತೆಂಡಲ್ಕೂರ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ

ಹೊಸದಿಲ್ಲಿ : ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಅವರು, ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದು ವಿಶ್ವದಾಖಲೆ ನಿರ್ಮಿಸಿದ್ದಾರೆ.

ಐಸಿಸಿಯ ಒಂದು ಮಾದರಿಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆಗೆ ಕೊಹ್ಲಿ ಪಾತ್ರವಾಗಿದ್ದಾರೆ. ಇಲ್ಲಿಯವರೆಗೆ ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 51 ಶತಕ ಹೊಡೆದಿದ್ದರು. ಕೊಹ್ಲಿ ಇಂದು 102 ಎಸೆತಗಳಲ್ಲಿ 52ನೇ ಶತಕ ಸಿಡಿಸಿ ಸಚಿನ್ ದಾಖಲೆಯನ್ನು ಮುರಿದಿದ್ದಾರೆ.

ಇದನ್ನು ಓದಿ:  ಅಂಧರ ಮಹಿಳಾ ಟಿ20 ಕ್ರಿಕೆಟ್‌ ವಿಶ್ವಕಪ್‌ ಗೆದ್ದ ಭಾರತ

ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರು ಇವರು.

1.ವಿರಾಟ್ ಕೊಹ್ಲಿ(ಏಕದಿನ) – 52
2.ಸಚಿನ್ ತೆಂಡೂಲ್ಕರ್(ಟೆಸ್ಟ್)- 51
3.ಸಚಿನ್ ತೆಂಡೂಲ್ಕರ್ (ಏಕದಿನ) – 49
4. ಜಾಕ್ವೆಸ್ ಕಾಲಿಸ್ (ಟೆಸ್ಟ್)-45
5.ರಿಕಿ ಪಾಂಟಿಂಗ್ (ಟೆಸ್ಟ್) – 41

ವಿರಾಟ್ ಕೊಹ್ಲಿ 48 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರೆ 102 ಎಸೆತಗಳಲ್ಲಿ ಶತಕ ಹೊಡೆದರು. ಅಂತಿಮವಾಗಿ ಕೊಹ್ಲಿ 130 ರನ್(11 ಬೌಂಡರಿ, 7 ಸಿಕ್ಸ್) ಹೊಡೆದು ಔಟಾದರು.

ಎರಡನೇ ವಿಕೆಟ್‌ಗೆ ರೋಹಿತ್ ಶರ್ಮಾ ಮತ್ತು ಕೊಹ್ಲಿ 109 ಎಸೆತಗಳಿಗೆ 136 ರನ್ ಜೊತೆಯಾಟವಾಡಿದ್ದರೆ ನಾಲ್ಕನೇ ವಿಕೆಟಿಗೆ ಕೆಎಲ್ ರಾಹುಲ್ ಜೊತೆ 74 ಎಸೆತಗಳಲ್ಲಿ 76 ರನ್ ಜೊತೆಯಾಟವಾಡಿದರು. ಭಾರತದ ಮೊತ್ತ 25 ಆಗಿದ್ದಾಗ ಕ್ರೀಸ್‌ಗೆ ಆಗಮಿಸಿದ ಕೊಹ್ಲಿ ತಂಡದ ಸ್ಕೋರ್ 276 ಆಗಿದ್ದಾಗ ಕ್ಯಾಚ್ ನೀಡಿ ಔಟಾದರು.

Tags:
error: Content is protected !!