Mysore
21
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಗೃಹ ಬಳಕೆ ಗ್ಯಾಸ್‌ ಸಿಲಿಂಡರ್‌ಗೆ ಸಮಸ್ಯೆ ಇಲ್ಲ: ಸಚಿವ ಮುನಿಯಪ್ಪ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಗ್ಯಾಸ್‌ ಸಿಲಿಂಡರ್‌ ಕೊರತೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆ ಸಚಿವ ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಅತಿವೃಷ್ಟಿ, ಅನಾವೃಷ್ಟಿ ಸಮಸ್ಯೆಯಂತೆ ಇದು ಸಹ ಸಮಸ್ಯೆ ಅಂತಾ ತಿಳಿಯಬೇಕು. ಒಂದೂವರೆ ಲಕ್ಷ ಕಮರ್ಷಿಯಲ್‌ ಗ್ಯಾಸ್‌ ಬೇಕು. ಮೂರುವರೆ ಲಕ್ಷ ಗೃಹಬಳಕೆ ಸಿಲಿಂಡರ್‌ ಬೇಕಾಗುತ್ತದೆ. ನಾವು ಶೇ.75ರಷ್ಟು ಹೊರದೇಶದ ಮೇಲೆ ಡಿಪೆಂಡ್‌ ಆಗಿದ್ದೇವೆ ಎಂದು ಹೇಳಿದರು.

ಇನ್ನೆರಡು ದಿನದಲ್ಲಿ ಮುಂಬೈಗೆ ಗ್ಯಾಸ್‌ ಸಿಲಿಂಡರ್‌ ಬರಲಿದೆ. ಹಡಗು ಬರಲು ಬಿಟ್ಟಿರುವುದರಿಂದ ಸಮಸ್ಯೆ ಬಗೆಹರಿಯಲಿದೆ. ಎರಡು ದಿನದಲ್ಲಿ ಒಂದು ಹಡಗು 10 ದಿನದಲ್ಲಿ ಮತ್ತೊಂದು ಹಡಗು ಬರುತ್ತದೆ. ಜಿಲ್ಲಾಧಿಕಾರಿಗೂ ಸೂಚನೆ ನೀಡಲಾಗಿದೆ. ಇದರಲ್ಲಿ ಗೊಂದಲ ಬೇಡ. ನಾನು ಸಾರ್ವಜನಿಕರಲ್ಲೂ ಮನವಿ ಮಾಡುತ್ತೇನೆ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಗ್ಯಾಸ್‌ ಬುಕ್‌ ಮಾಡಿಕೊಳ್ಳಿ. ಹೋಟೆಲ್‌, ಆಸ್ಪತ್ರೆ, ಶಾಲೆಗಳಿಗೆ ಕಮರ್ಷಿಯಲ್‌ ಗ್ಯಾಸ್‌ ಬೇಕಾಗುತ್ತದೆ ಎಂದು ತಿಳಿಸಿದರು.

 

Tags:
error: Content is protected !!