Mysore
28
overcast clouds

Social Media

ಬುಧವಾರ, 15 ಜನವರಿ 2025
Light
Dark

ವಿನೇಶ್‌ ಫೋಗಟ್‌ ನಮ್ಮ ದೇಶದ ಕೋಹಿನೂರ್‌ ವಜ್ರ: ಭಜರಂಗ್‌ ಪೂನಿಯಾ!

ನವದೆಹಲಿ: ದೇಹ ತೂಕದ ಏರಿಕೆಯಿಂದಾಗಿ ಪ್ಯಾರಿಸ್‌ ಒಲಂಪಿಕ್ಸ್‌ 2024ರ ಮಹಿಳೆಯರ 50 ಕೆಜಿ ಫ್ರೀ ಸ್ಟೈಲ್‌ ಕುಸ್ತಿ ವಿಭಾಗದಲ್ಲಿ ಫೈನಲ್ಸ್‌ ಪಂದ್ಯದಿಂದ ಅನರ್ಹಗೊಂಡ ಭಾರತದ ಖ್ಯಾತ ಕುಸ್ತಿಪಟು ವಿನೇಶ್‌ ಫೋಗಟ್‌ ಪರವಾಗಿ ಭಜರಂಗ್‌ ಪೂನಿಯಾ ಮತ್ತೊಮ್ಮೆ ಬ್ಯಾಟ್‌ ಬೀಸಿದ್ದಾರೆ.

ತಮ್ಮ ಅನರ್ಹತೆ ಪ್ರಶ್ನಿಸಿ ಕ್ರೀಡಾ ನ್ಯಾಯಮಂಡಳಿಗೆ ಫೋಗಟ್‌ ಸಲ್ಲಿಸಿದ್ದ ಅರ್ಜಿ ವಜಾಗೊಂಡ ಹಿನ್ನೆಯಲ್ಲಿ ಭಜರಂಗ್‌ ವಿನೇಶ್‌ ಫೋಗಟ್‌ ಅವರನ್ನು ಭಾರತದ ಕೋಹಿನೂರ್‌ ವಜ್ರ ಎಂದು ಬಣ್ಣಿಸುವ ಮೂಲಕ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಈ ಕತ್ತಲೆಯಲ್ಲಿ ನಿನ್ನ ಪದಕವನ್ನು ಕಿತ್ತುಕೊಂಡಿದ್ದಾರೆ ಎನ್ನುವ ಭಾವನೆ ನನ್ನಲ್ಲಿ ಮೂಡಿದೆ. ನೀವು ಇಂದು ಇಡೀ ಪ್ರಪಂಚದಲ್ಲಿ ವಜ್ರದಂತೆ ಹೊಳೆಯುತ್ತಿದ್ದೀರಿ.

ವಿಶ್ವ ಚಾಂಪಿಯನ್ ವಿನೇಶ್ ಫೋಗಟ್ ಅವರು ನಮ್ಮ ಭಾರತ ಹೆಮ್ಮೆ, ದೇಶದ ಕೊಹಿನೂರ್ ಆಗಿದ್ದಾರೆ. ಪ್ರಪಂಚದಾದ್ಯಂತ ನಿಮ್ಮ ಹೆಸರಿನಲ್ಲಿ ಹರ್ಷ ವ್ಯಕ್ತವಾಗುತ್ತಿದೆ. ಪದಕಗಳನ್ನು ಬಯಸುವವರು ಅವುಗಳನ್ನು ತಲಾ 15 ರೂ.ಗಳಂತೆ ಖರೀದಿಸಬಹುದು ಎಂದು ಟ್ವೀಟ್‌ ಮಾಡಿದ್ದಾರೆ.

ಇನ್ನು ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷರಾಗಿದ್ದ ಬ್ರಿಜ್‌ ಭೂಷಣ್‌ ವಿರುದ್ಧ ನಡೆದಿದ್ದ ಪ್ರತಿಭಟನೆಯಲ್ಲಿ ತಮಗೆ ದೊರಕಿರುವ ಪ್ರಶಸ್ತಿಗಳನ್ನು ನಮಗೆ ಹಿಂತಿರುಗಿಸಬೇಕು. ಪದಕಗಳ ಬೆಲೆ ಕೇವಲ 15 ರೂ. ಮಾತ್ರ ಎಂಬ ವಿವಾದಾತ್ಮಕ ಹೇಳಿಕೆಯನ್ನು ಬ್ರಿಜ್‌ ಭೂಷಣ್‌ ನೀಡದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಪದಕಗಳನ್ನು ಬಯಸುವವರು ಅವುಗಳನ್ನು ತಲಾ 15 ರೂ.ಗಳಂತೆ ಖರೀದಿಸಬಹುದು ಎಂದು ಟ್ವೀಟ್‌ ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ.

Tags: