ಹರಿಯಾಣ: ವಿಜಯ್ ಹಜಾರೆ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಕರ್ನಾಟಕ, ಹರಿಯಾಣ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ.
ಈ ಮೂಲಕ ಐದನೇ ಬಾರಿ ಟೂರ್ನಿಯ ಫೈನಲ್‌ಗೆ ಅರ್ಹತೆ ಪಡೆದು ಬೀಗಿದೆ.
ಟಾಸ್ ಗೆದ್ದು ಮೊದಲ ಬೌಲಿಂಗ್ ಮಾಡಲು ಮಯಾಂಕ್ ಪಡೆ ಮುಂದಾಯಿತು. ಮೊದಲು ಬ್ಯಾಟಿಂಗ್ ಆಡಿದ ಹರಿಯಾಣ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 237ರನ್ ಕಲೆಹಾಕಿತ್ತು. ಈ ಮೊತ್ತದ ಬೆನ್ನತ್ತಿದ ಕರ್ನಾಟಕ 47.2ಓವರ್‌ಗಳಲ್ಲಿ ವಿಕೆಟ್ ನಷ್ಟಕ್ಕೆ 238 ರನ್ ಸೇರಿಸಿ ಫೈನಲ್ ಪ್ರವೇಶಿಸಿತು.