Mysore
28
overcast clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಟಿ20 ವಿಶ್ವಕಪ್ 2026 : ಕಣದಲ್ಲಿವೆ 20 ತಂಡಗಳು

ಕೊಲಂಬೊ : ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಹತ್ತನೇ ಆವೃತ್ತಿ ನಾಳೆ (ಫೆಬ್ರವರಿ 7) ಭಾರತ ಮತ್ತು ಶ್ರೀಲಂಕಾ ಆತಿಥೇಯತ್ವದಲ್ಲಿ ಆರಂಭವಾಗಲಿದೆ. ಟೂರ್ನಮೆಂಟ್ ಮಾರ್ಚ್ 8ರಂದು ಫೈನಲ್‌ನೊಂದಿಗೆ ಮುಕ್ತಾಯಗೊಳ್ಳಲಿದ್ದು, ಒಟ್ಟು 55 ಪಂದ್ಯಗಳು ನಡೆಯಲಿವೆ. ಅಲ್ಲದೇ ಇದೇ ಮೊದಲ ಬಾರಿಗೆ 20 ತಂಡಗಳು ಭಾಗವಹಿಸುತ್ತಿವೆ.

ಭಾರತ ತನ್ನ ಮೊದಲ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ಕಣಕ್ಕಿಳಿಯಲಿದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನ ತನ್ನ ಆರಂಭಿಕ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ಧ ಸೆಣಸಲಿದೆ.

ಪಂದ್ಯಾವಳಿಯ ಮೊದಲ ಪಂದ್ಯ ಫೆಬ್ರವರಿ 7ರಂದು ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಪಾಕಿಸ್ತಾನ ವಿರುದ್ಧ ನೆದರ್‌ಲ್ಯಾಂಡ್ಸ್ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ಒಂದೇ ಗ್ರೂಪ್‌ನಲ್ಲಿರುವುದು ಗಮನಾರ್ಹ.

ಯಾವ ತಂಡ ಯಾವ ಗುಂಪಿನಲ್ಲಿದೇ?

ಗ್ರೂಪ್ A:
ಭಾರತ
ಪಾಕಿಸ್ತಾನ
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ
ನೆದರ್‌ಲ್ಯಾಂಡ್ಸ್,
ನಮೀಬಿಯಾ

ಗ್ರೂಪ್ B
ಆಸ್ಟ್ರೇಲಿಯಾ
ಶ್ರೀಲಂಕಾ
ಐರ್ಲೆಂಡ್,
ಜಿಂಬಾಬ್ವೆ
ಒಮಾನ್

ಗ್ರೂಪ್ C
ಇಂಗ್ಲೆಂಡ್
ವೆಸ್ಟ್ ಇಂಡೀಸ್
ನೇಪಾಳ,
ಇಟಲಿ,
ಸ್ಕಾಟ್‌ಲ್ಯಾಂಡ್

ಗ್ರೂಪ್ D
ನ್ಯೂಜಿಲೆಂಡ್
ದಕ್ಷಿಣ ಆಫ್ರಿಕಾ
ಅಫ್ಘಾನಿಸ್ತಾನ,
ಕೆನಡಾ,
ಯುನೈಟೆಡ್ ಅರಬ್ ಎಮಿರೇಟ್ಸ್

ಪಂದ್ಯಾವಳಿಯಲ್ಲಿ ಪ್ರತಿ ಗ್ರೂಪ್‌ನಲ್ಲಿ ತಂಡಗಳು ಒಮ್ಮೆ ಪರಸ್ಪರ ಆಡಲಿವೆ. ಪ್ರತಿ ಗ್ರೂಪ್‌ನ ಮೊದಲ ಎರಡು ತಂಡಗಳು ಸೂಪರ್ 8ಗೆ ಅರ್ಹತೆ ಪಡೆಯಲಿವೆ. ಅಲ್ಲಿಂದ ಸೆಮಿಫೈನಲ್‌ಗೆ ಮುಂದುವರಿಯಲು ಟಾಪ್ ಎರಡು ತಂಡಗಳು ಸ್ಥಾನ ಪಡೆಯಲಿವೆ.

 

 

Tags:
error: Content is protected !!