ದುಬೈ: ಅದ್ಬುತ ಫಾರ್ಮ್‌ನಲ್ಲಿರುವ ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ಐ ಸೂರ್ಯಕುಮಾರ್ ಯಾದವ್ ಐಸಿಸಿ ಟಿ-೨೦ ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ೨ನೇ ಟಿ-೨೦ ಪಂದ್ಯದಲ್ಲಿ ೫೧ ಎಸೆತಗಳಲ್ಲಿ ೧೧೧ ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಅವರು ಪ್ರಥಮ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸರಣಿಯಲ್ಲಿ ೩೧ ಪಾಯಿಂಟ್ಸ್ ಸಂಪಾದಿಸಿರುವ ಸೂರ್ಯ ಕುಮಾರ್ ಯಾದವ್ ಅವರು ಒಟ್ಟು ೮೯೦ ಪಾಯಿಂಟ್ಸ್‌ಗಳೊಂದಿಗೆ ೨ನೇ ಸ್ಥಾನದಲ್ಲಿರುವ ಪಾಕಿಸ್ತಾನದ ಮೊಹಮದ್ ರಿಜ್ವಾನ್‌ಗಿಂತಲೂ ೫೪ ಹೆಚ್ಚು ಪಾಯಿಂಟ್ಸ್‌ಗಳನ್ನು ಕಲೆ ಹಾಕಿದ್ದಾರೆ.
ಹೆಸರು ಸ್ಥಾನ
ವಿರಾಟ್ ಕೊಹ್ಲಿ ೦೬
ರೋಹಿತ್ ಶರ್ಮಾ ೦೮
ಭುವನೇಶ್ವರ್ ಕುಮಾರ್ ೧೧
ಅರ್ಶದೀಪ್ ಸಿಂಗ್ ೨೧
ಯಜುವೇಂದ್ರ ಚಾಹಲ್ ೪೦
ಹಾರ್ದಿಕ್ ಪಾಂಡ್ಯಾ ೫೦