ದುಬೈ: ಒತ್ತಡದ ನಡುವೆಯೂ ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಸಾಧಾರಣ ಪ್ರದರ್ಶನ ತೋರಿದರು ಎಂದು ಬಿಸಿಸಿಐ ಉಪಾದ್ಯಕ್ಷ ರಾಜೀವ್ ಶುಕ್ಲಾ ಮತ್ತು ಸಂಸದ ಅನುರಾಗ್ ಠಾಕೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇಶಕ್ಕಾಗಿ ಹೇಗೆ ಆಡಬೇಕು, ಒತ್ತಡ ಹೇಗೆ ನಿಭಾಯಿಸಬೇಕು ಎಂಬುದನ್ನು ವಿರಾಟ್ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ವೈಯುಕ್ತಿಕ ಇನ್ನಿಂಗ್ಸ್ ಮುಖ್ಯವಲ್ಲ, ದೇಶಕ್ಕಾಗಿ ಆಡುವುದು ಮುಖ್ಯ. ತಮ್ಮ ಅದ್ಭುತ ಇನ್ನಿಂಗ್ಸ್ ಮೂಲಕ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದಾರೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಅವರ ಶತಕ ಅದ್ಭುತವಾಗಿತ್ತು. ಶ್ರೇಯಸ್ ಮತ್ತು ಗಿಲ್ ಕೂಡ ಚೆನ್ನಾಗಿ ಆಡಿದರು. ಎಲ್ಲರೂ ಸಂಪೂರ್ಣವಾಗಿ ಫಿಟ್ ಅಗಿದ್ದಾರೆ ಎಂದು ರಾಜೀವ್ ಶುಕ್ಲಾ ತಿಳಿಸಿದ್ದಾರೆ.





