ಪರ್ತ್: ಆಸ್ಟ್ರೇಲಿಯಾದ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಐತಿಹಾಸಿಕ ಗೆಲುವು ಸಾಧಿಸಿದೆ.
ಟೆಸ್ಟ್ ಪಂದ್ಯದಲ್ಲಿ ದಾಖಲೆಯ 295 ರನ್‌ಗಳಿಂದ ಭಾರತ ಗೆಲುವು ಸಾಧಿಸಿದ್ದು, ಐದು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.
ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತವು 150 ಅಥವಾ ಅದಕ್ಕಿಂತ ಕಡಿಮೆ ರನ್‌ಗಳಿಗೆ ಆಲೌಟ್ ಆಗಿದ್ದರೂ ಭಾರತದ ಹೊರಗೆ ಟೆಸ್ಟ್ ಗೆದ್ದಿರುವುದು ಇದೇ ಮೊದಲು ಎಂದು ರಜನೀಶ್ ಗುಪ್ತಾ ಮಾಹಿತಿ ಹಂಚಿಕೊಂಡಿದ್ದಾರೆ.
ನಾಯಕ ಜಸ್ಪ್ರೀತ್ ಬುಮ್ರಾ ಮೊದಲ ಇನ್ನಿಂಗ್ಸ್‌ನಲ್ಲಿ ಎಂಟು ವಿಕೆಟ್‌ಗಳನ್ನು ಕಬಳಿಸಿ ಆಸ್ಟ್ರೇಲಿಯಾವನ್ನು 104 ರನ್‌ಗಳಿಗೆ ಅಲೌಟ್ ಮಾಡಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ 161 ಮತ್ತು ವಿರಾಟ್ ಕೊಹ್ಲಿ 100 ರನ್‌ಗಳ ಬ್ಯಾಟಿಂಗ್‌ನೊಂದಿಗೆ ಭಾರತ ಉತ್ತಮ ರನ್ ಕಲೆ ಹಾಕಿತು.
ಇನ್ನು ಮೊಹಮ್ಮದ್ ಸಿರಾಜ್ ಅವರು ಟೆಸ್ಟ್‌ನಲ್ಲಿ ಐದು ವಿಕೆಟ್‌ಗಳೊಂದಿಗೆ ಫಾರ್ಮ್‌ಗೆ ಮರಳಿದರು. ರಾಣಾ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಸಂಭ್ರಮಿಸಿದರು.
ಇನ್ನು ಎಂಟು ವಿಕೆಟ್ ಪಡೆದ ಬೂಮ್ರಾ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.