ವಿಶ್ವಕಪ್ 2023ರಲ್ಲಿ ಹಲವು ದಾಖಲೆ, ಇಂಪ್ಯಾಕ್ಟ್, ರೋಚಕ ಪಂದ್ಯಗಳು ನಡೆದಿವೆ. ಅದರಲ್ಲಿಯೂ ಅನಿರೀಕ್ಷಿತ ಘಟನೆಗಳು ಸಂಭವಿಸಿದ್ದು, ಅವುಗಳ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.
ಈ ಆವೃತ್ತಿಯಲ್ಲಿ ನೀರಸ ಪ್ರದರ್ಶನ ತೋರಿದ ಕಳೆದ ಬಾರಿ ಚಾಂಪಿಯನ್ ಇಂಗ್ಲೆಂಡ್ ತಂಡವು ಯಾರು ಊಹಿಸದ ರೀತಿ ಲೀಗ್ ಹಂತದಲ್ಲಿಯೇ ಹೊರಬಿದ್ದಿತು. ತಾನಾಡಿದ 9 ಪಂದ್ಯಗಳಲ್ಲಿ ಕೇವಲ 3 ಪಂದ್ಯಗಲನ್ನು ಗೆದ್ದು, 6 ಪಂದ್ಯಗಳಲ್ಲಿ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿತು.
ಶ್ರೀಲಂಕಾ ತಂಡ ಎಷ್ಯಾ ಕಪ್ ಹಾಗೂ ವಿಶ್ವಕಪ್ ನಲ್ಲಿ ತೋರಿದ ಕಳಪೆ ಪ್ರದರ್ಶನದಿಂದಾಗಿ ಐಸಿಸಿ ಶ್ರೀಲಂಕಾ ತಂಡವನ್ನು ಚಾಂಪಿಯನ್ಸ್ ಟ್ರೋಫಿಯಿಂದ ಅಮಾನತುಗೊಳಿಸಿತು. 9ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದು ಮುಖಭಂಗ ಅನುಭವಿಸಿತು.
ನೆದರ್‌ಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳೆರೆಡು ಉತ್ತಮ ಪ್ರದರ್ಶನ ತೋರಿದವು. ಈ ಎರಡು ತಂಡಗಳು ಕನಿಷ್ಠ 2 ಪಂದ್ಯ ಗೆಲ್ಲುವ ಮೂಲಕ 2024ರ ಟಿ20 ವಿಶ್ವಕಪ್‌ಗೆ ನೇರ ಆಯ್ಕೆಯಾಗಿವೆ.
ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಮೊಟ್ಟ ಮೊದಲ ಬಾರಿಗೆ ನೆದರ್‌ಲೆಂಡ್ ತಂಡ ಸೋಲಿಸಿದ್ದು, ಈ ಬಾರಿ ವಿಶೇಷವಾಗಿದೆ. ಮೊದಲು ಬ್ಯಾಟ್ ಮಾಡಿದ ನೆದರ್‌ಲೆಂಡ್ 245/8 ಕಲೆಹಾಕಿತು. ಇದನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆಲ್‌ಔಟ್ ಆಗಿ ಕೇವಲ 207ರನ್‌ಗಳಿಸಿ 38 ರನ್‌ಗಳಿಂದ ಸೋಲನುಭವಿಸಿತು.
ಅಫ್ಘಾನಿಸ್ತಾನ ತಂಡ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಮತ್ತೊಮ್ಮೆ ಪಾಕ್‌ಗೆ ಕಂಠಕವಾಗಿದ್ದಾರೆ. ಪಾಕ್ ನೀಡಿದ 282ರನ್‌ಗಳ ಗುರಿಯನ್ನು ಕೇವಲ 2 ವಿಕೆಟ್ ಕಳೆದುಕೊಂಡು ಮುಟ್ಟುವ ಮೂಲಕ ಪಾಕ್ ಸೆಮಿಸ್ ಕನಸನ್ನು ನುಚ್ಚುನೂರು ಗೊಳಿಸಿತು.
ಜತೆಗೆ ಅಫ್ಘಾನ್ 69ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ 2019ರ ಸೋಲಿಗೆ ಸೇಡು ತೀರಿಸಿಕೊಂಡಿತು.