Mysore
28
few clouds

Social Media

ಸೋಮವಾರ, 17 ಫೆಬ್ರವರಿ 2025
Light
Dark

ಪ್ರಥಮ ದರ್ಜೆ ಕ್ರಿಕೆಟ್:‌ ವಿಶ್ವ ದಾಖಲೆ ನಿರ್ಮಿಸಿದ ಕರುಣ್‌ ನಾಯರ್‌

ಬೆಂಗಳೂರು: ವಿಜಯ್‌ ಹಜಾರೆ ಟ್ರೋಫಿಯಲ್ಲಿ ವಿದರ್ಭ ತಂಡದ ನಾಯಕನಾಗಿ ಆಡುತ್ತಿರುವ ಕರ್ನಾಟಕದ ಕರುಣ್‌ ನಾಯರ್‌ ಅಮೋಘ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ರನ್‌ಗಳಿಕೆಯಲ್ಲಿ ವಿಶ್ವ ದಾಖಲೆ ಮಾಡಿದ್ದಾರೆ.

ಈ ಟೂರ್ನಿಯಲ್ಲಿ 542 ರನ್‌ ಬಾರಿಸುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಬಾರಿಸಿ ವಿಶ್ವ ದಾಖಲೆ ಬರೆದಿದ್ದಾರೆ.

ಈ ಬಾರಿ ಬ್ಯಾಟ್‌ ಬೀಸಿದ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಶತಕ ಬಾರಿಸಿದ್ದಾರೆ. ಮೊದಲ ಪಂದ್ಯದಲ್ಲಿ ಜಮ್ಮು ಕಾಶ್ಮೀರ ವಿರುದ್ಧ 112 ರನ್‌ ಗಳಿಸಿದ್ದರು. ನಂತರದ ಮೂರು ಪಂದ್ಯಗಳಲ್ಲಿ ಛತ್ತೀಸಗಢ, ಚಂಡೀಗಢ, ತಮಿಳುನಾಡು ವಿರುದ್ಧ ಕ್ರಮವಾಗಿ 44 ರನ್‌, 163 ರನ್‌, ಹಾಗೂ 111 ರನ್‌ ಗಳಿಸಿದ್ದರು. ಶುಕ್ರವಾರ ಉತ್ತರ ಪ್ರದೇಶದ ವಿರುದ್ಧ 112 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದಾರೆ.

ಈ ಹಿಂದೆ 2010 ರಲ್ಲಿ ನ್ಯೂಜಿಲೆಂಡ್‌ನ ಜೇಮ್ಸ್‌ ಫ್ರಾಂಕ್ಲಿನ್‌ 527 ರನ್‌ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ದಕ್ಷಿಣ ಆಫ್ರಿಕಾದ ಜೋಶುವಾ ವಾನ್‌ ಹೀರ್ದನ್‌ (512 ರನ್‌), ಪಾಕಿಸ್ತಾನದ ಫಖರ್‌ ಜಮಾನ್‌ (455 ರನ್‌) ಹಾಗೂ ತಫೀಕ್‌ ಉಮರ್‌ (422 ರನ್‌) ನಂತರದ ಸ್ಥಾನದಲ್ಲಿದ್ದಾರೆ.

Tags: