Mysore
26
scattered clouds

Social Media

ಮಂಗಳವಾರ, 16 ಜೂನ್ 2026
Light
Dark

ಮೇಕೆದಾಟು ಯೋಜನೆ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ: ಗಣಿಗ ರವಿಕುಮಾರ್‌

ಮಂಡ್ಯ: ವಿಜಯ್‌ ರೀತಿ ತಮಿಳುನಾಡಿನಲ್ಲಿ ನೂರು ಮಂದಿ ಮುಖ್ಯಮಂತ್ರಿಯಾದರೂ ಸಹ ನಾವು ಮೇಕೆದಾಟು ಡ್ಯಾಂ ಕಟ್ಟೋದನ್ನು ತಡೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ಶಾಸಕ ಗಣಿಗ ರವಿಕುಮಾರ್‌ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾವು ಮೇಕೆದಾಟು ಯೋಜನೆಯ ಡಿಪಿಆರ್‌ ಅನ್ನು ಸಿದ್ಧಪಡಿಸಿದ್ದೇವೆ. ಅಲ್ಲದೇ ಸುಪ್ರೀಂಕೋರ್ಟ್‌ ಸಹ ಕಾವೇರಿ ಬೋರ್ಟ್‌ನಲ್ಲಿ ತೀರ್ಮಾನ ಮಾಡಿಕೊಳ್ಳಿ ಎಂದು ಹೇಳಿದೆ. ನಮ್ಮ ಪರವಾಗಿ ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ಅದರಂತೆ ನಾವು ಡಿಪಿಆರ್‌ನ್ನು ಸಿದ್ಧತೆ ಮಾಡಿಕೊಂಡಿದ್ದೇವೆ. ಇದೀಗ ಮೇಕೆದಾಟು ವಿಚಾರದಲ್ಲಿ ಕಾನೂನು ಹೋರಾಟ ಮಾಡುವುದಾಗಿ ವಿಜಯ್‌ ಹೇಳಿದ್ದಾರೆ ಎಂದು ಹೇಳಿದರು.

ತಮಿಳುನಾಡಿನವರಿಗೆ ಅವರ ಪಾಲಿನ ನೀರನ್ನು ನಾವು ಕೊಡುತ್ತಾ ಇದೀವಿ. ನಮ್ಮ ಜಾಗದಲ್ಲಿ ಜಲಾಶಯ ಕಟ್ಟುವುದನ್ನು ತಡೆಯುವ ಹಕ್ಕು ಅವರಿಗಿಲ್ಲ ಎಂದು ಕಿಡಿಕಾರಿದರು.

 

Tags:
error: Content is protected !!