ಬೆಂಗಳೂರು : ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ಗೆ ಭಾರತ ಭರ್ಜರಿಯಾಗಿ ಎಂಟ್ರಿಕೊಟ್ಟಿದೆ. ಇಂದು(ಭಾನುವಾರ) ಮದ್ಯಾಹ್ನ 2 ಗಂಟೆಗೆ ಆರಂಭವಾಗಲಿದ್ದು, ಇದಕ್ಕೂ ಮುನ್ನಾ ಭಾರತ ತಂಡಕ್ಕೆ ವಿಶ್ವಕಪ್ ಗೆಲ್ಲುವಂತೆ ಚಾಲೆಂಜಿಂಗ್ ಸ್ವಾರ್ ದರ್ಶನ್ ಶುಭ ಕೋರಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ನಡೆದ ಸಂದರರ್ಶನದಲ್ಲಿ ನಟ ದರ್ಶನ್ ಭಾರತ ತಂಡದ ಅತ್ಯುತ್ತಮ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದದ್ದಾರೆ.
ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಅವರು ದರ್ಶನ ಅವರ ಸಂದರ್ಶನ ಮಾಡಿದ್ದಾರೆ. ಈ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ತುಣುಕನ್ನು ಹಂಚಿಕೊಡಿದ್ದಾರೆ.
ಸಂದರ್ಶನದಲ್ಲಿ ಸ್ಟಾರ್ ಸ್ಪೋರ್ಟ್ಸ್ ಕನ್ನಡ ದರ್ಶನ್ ಅವರಿಗೆ ಟೀಂ ಇಂಡಿಯಾ ಜೆರ್ಸಿ ನೀಡಿದ್ದು, ಅದರ ಹಿಂದೆ ಡಿ ಬಾಸ್, ನಂಬರ್ 01 ಎಂದು ಬರೆಯಲಾಗಿದೆ. ಈ ಜೆರ್ಸಿಯನ್ನು ನಟ ದರ್ಶನ್ ನೋಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.
ಸಂದರ್ಶನದಲ್ಲಿ ಕಾಟೇರಾ ಬಗ್ಗೆಯೂ ನಟ ದರ್ಶನ್ ಮಾತನಾಡಿದ್ದಾರೆ.