Mysore
21
broken clouds

Social Media

ಸೋಮವಾರ, 13 ಜನವರಿ 2025
Light
Dark

ನಿಮ್ಮ ಆಸ್ತಿ ಮಾರಿ ಮುಸ್ಲಿಮರಿಗೆ ಹಣ ಕೊಡಿ : ಸಿದ್ದು ಮೇಲೆ ರೇಣುಕಾಚಾರ್ಯ ವಾಗ್ದಾಳಿ

ಬೆಂಗಳೂರು : ನಿಮಗೆ ಮುಸ್ಲಿಮರ ಮೇಲೆ ಅಷ್ಟೊಂದು ಪ್ರೀತಿ, ಕಾಳಜಿ ಇದ್ದರೆ ನಿಮ್ಮ ಆಸ್ತಿ ಮಾರಿ ಅವರಿಗೆ ಹಣ ಕೊಡಿ ಅಂತ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಅಲ್ಪಸಂಖ್ಯಾತರಿಗೆ ಸರ್ಕಾರ 10 ಸಾವಿರ ಕೋಟಿ ರೂ. ಘೋಷಣೆ ಮಾಡಿರುವುದರ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಮೇಲೆ ಬಹಳಷ್ಟು ಗೌರವ ಇದೆ. ಮುಖ್ಯಮಂತ್ರಿ ಆದವರು ಎಲ್ಲಾ ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಆದರೆ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಮೇಲೆ ವಿಶೇಷವಾದ ಒಲವನ್ನು ಹೊಂದಿದ್ದಾರೆ. ನಮಗೆ ಸಂಘರ್ಷದ ಅವಶ್ಯಕತೆ ಇಲ್ಲ. ಆದರೆ ಮುಖಯಮಂತ್ರಿಗಳು ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ ಎಂದಿದ್ದಾರೆ.

ಸಿದ್ದರಾಮಯ್ಯನವರು ನಾನು ಕುಂಕುಮ ಹಚ್ಚಲ್ಲ, ಕೇಸರಿ ಪೇಟ ಹಾಕಲ್ಲ ಅಂತ ಹೇಳ್ತಾರೆ. ನಿಮಗೆ ಮುಸ್ಲಿಮರ ಮೇಲೆ ಅಷ್ಟೊಂದು ಪ್ರೀತಿ ಇದ್ರೆ ನಿಮ್ಮ ಆಸ್ತಿ ಮಾರಿ ಹಣ ಕೊಡಿ. ನೀವೆನು ದೇಶದ ಪ್ರಧಾನ ಮಂತ್ರಿನಾ ? ಇಲ್ಲ ಸರ್ಕಾರ ನಿಮ್ಮ ಆಸ್ತಿನಾ ? ಇಲ್ಲೇನು ಪಾಕಿಸ್ತಾನ ಆಡಳಿತ ಮಾಡುತ್ತಾ ? ಸಿದ್ದರಾಮಯ್ಯ ಅವರ ಪಕ್ಕದಲ್ಲಿ ಭಯೋತ್ಪಾದಕರು ಕುಳಿತುಕೊಳ್ತಾರೆ. ಮೀರ್‌ ಅವರು ಸಾಬ್ರಿಗೆ ತಲೆಬಾಗಬೇಕು ಅಂತಾರೆ. ಕರ್ನಾಟಕ ಶಾಂತಿ ಸುವ್ಯವಸ್ಥೆಗೆ ಹೆಸರಾಗಿದೆ. ಹೀಗೆ ಮಾಡಿದ್ರೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಪಥನವಾಗುತ್ತೆ. ನೀವು ಮೂರು ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿ ಇದ್ದೀರ. ಹೀಗೆ ಮಾಡಿದರೆ ಮುಂಬರುವ ಲೋಕಸಭಾ ಚುನಾವಣೆಯ ವೇಳೆ ಜನ ಮತ್ತೆ ನಿಮ್ಮನ್ನು ತಿರಸ್ಕರಿಸುತ್ತಾರೆ ಎಂದು ಕಿಡಿ ಕಾರಿದ್ದಾರೆ.

ಅಷ್ಟೇ ಅಲ್ಲದೆ ಸಿದ್ದರಾಮಯ್ಯ ಅವರು ರಾಜ್ಯದ ಜನರ ಬಳಿ ಕ್ಷಮೆ ಕೇಳಬೇಕು. ತಕ್ಷಣವೇ ತಮ್ಮ ಹೇಳಿಕೆಯನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ