ಬೆಳಗಾವಿ : ಬಿಜೆಪಿ ಮುಖಂಡ ಪೃಥ್ವಿ ರೆಡ್ಡಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ, ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೋಳಿ ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೃಥ್ವಿ ರೆಡ್ಡಿ ಮೇಲಿನ ಹಲ್ಲೆ ಆರೋಪ ಸತ್ಯಕ್ಕೆ ದೂರವಾದ ಮಾತು. ಇದೊಂದು ಸುಳ್ಳು ಆರೋಪ. ನಾವು ಶಿಸ್ತಿನಿಂದ ರಾಜಕಾರಣ ಮಾಡುತ್ತೇವೆ. ಹಲ್ಲೆ ಮಾಡುವಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದಿದ್ದಾರೆ.
ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಸ್ಪಷ್ಟ ಮಾಹಿತಿ ಹೊರಬರಬೇಕು. ಯಾರು ಹಲ್ಲೆ ಮಾಡಿದ್ದಾರೆ ಎನ್ನುವ ಬಗ್ಗೆ ಫಾರೆನ್ಸಿಕ್ ವರದಿ ಬರೆಬೇಕಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಈ ಬಗ್ಗೆ ಅನುಮಾನಗಳಿವೆ. ನನ್ನ ವಿರುದ್ಧ ಶಡ್ಯಂತ್ರ ರೂಪಿಸಲಾಗಿದೆ. ಪೃಥ್ವಿ ಸಿಂಗ್ ಅವರು ವಾಸವಿರುವ ಮನೆ ಈ ಮೊದಲು ನನ್ನ ಕಚೇರಿಯಾಗಿತ್ತು. ಹಾಗಾಗಿ ರೆಂಟ್ ಅಗ್ರಿಮೆಂಟ್ ವಾಪಸ್ ಕೇಳಲು ನನ್ನ ಸಹಚರರು ಹೋಗಿದ್ದರು ಅಷ್ಟೇ. ಪೃಥ್ವಿ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ವೈರಲ್ ಆಗಿರುವ ಸಿಸಿ ಟಿವಿ ದೃಶ್ಯಗಳಲ್ಲಿ ಅವರು ವಿಭಿನ್ನವಾದ ಬಟ್ಟೆ ಧರಿಸಿದ್ದಾರೆ. ಆದರೆ ಮತ್ತೊಂದು ವಿಡಿಯೋ ತುಣುಕಿನಲ್ಲಿ ಬಿಳಿ ಶರ್ಟ್ ಧರಿಸಿದ್ದಾರೆ. ಆ ಶರ್ಟ್ ನಲ್ಲಿ ರಕ್ತದ ಕಲೆಗಳು ಕಂಡುಬಂದಿದೆ. ಈ ಹಲ್ಲೆ ಆರೋಪದಿಂದ ನನ್ನ ವರ್ಚಸ್ಸು ಹಾಳಾಗುತ್ತಿದೆ ಎಂದು ಹೇಳಿದ್ದಾರೆ.
ಪೃಥ್ವಿ ಸಿಂಗ್ ಮೋಸ್ಟ್ ಬೋಗಸ್ : ಪೃಥ್ವಿ ಸಿಂಗ್ ಮೇಲಿನ ಹಲ್ಲೆ ಪ್ರಕರಣಕ್ಕೆದ ಬಗ್ಗೆ ಮಾತನಾಡಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಚಾಕು ಇರಿತ ಪ್ರಕರಣ ರಾಜಕೀಯ ಪ್ರೇರಿತವೋ ಅಥವಾ ಶಡ್ಯಂತ್ರವೋ ಗೊತ್ತಾಗಬೇಕು. ಆತ ಮೋಸ್ಟ್ ಬೋಗಸ್ ಎಂದಿದ್ದರು.
ನಮ್ಮ ಕುಟುಂಬದವರೆಲ್ಲರೂ ಶಾಂತಿ ಪ್ರಿಯರು. ಎಸ್ ಪಿ ಜೊತೆ ಮಾತನಾಡಿದ್ದೇನೆ. ಚಾಕು ಇರಿತದ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕಿದೆ. ಆತ ಯಾರ ಆಪ್ತ ಎನ್ನುವುದಕ್ಕಿಂತ ನಮ್ಮ ಹೆಸರು ಬಂದಿದೆ ಈ ಬಗ್ಗೆ ವಿಚಾರ ಮಾಡಿದ್ದೇನೆ. ಪೃಥ್ವಿ ಸಿಂಗ್ ನನ್ನೇ ವಿಚಾರಣೆ ಮಾಡಬೇಕು. ಆತನ ಹೆಸರು ಬರೆದಿಟ್ಟು ಹುಡುಗರು ಆತ್ಮಹತ್ಯೆ ಮಾಡಿಕೊಂಡಿದ್ದರು 24 ಗಂಟೆಯೊಳಗೆ ಪ್ರಕರಣದ ಸತ್ಯಾಸತ್ಯತೆ ಗೊತ್ತಾಗಬೇಕು ಎಂದಿದ್ದರು.