ಕರ್ನಾಟಕ, ತಮಿಳುನಾಡು ಸೇರಿದಂತೆ ರಾಜಸ್ಥಾನದಲ್ಲಿ ಒಂದೇ ಪಕ್ಷ ಸತತ ಎರಡು ಬಾರಿ ಆಯ್ಕೆಯಾಗಿರುವ ಇತಿಹಾಸವಿಲ್ಲ. ಈ ಬಾರಿಯೂ ಆ ಪರಂಪರೆ ಹಾಗೇಯೇ ಮುಂದುವರೆದಿದೆ. ರಾಜಸ್ಥಾನದ ಮತದಾರರು ಈ ಬಾರಿ ಬದಲಾವಣೆ ಭಯಸಿದ್ದಾರೆ.
ರಾಜಸ್ಥಾನದಲ್ಲಿ ಬಿಜೆಪಿ ಪಕ್ಷವನ್ನು ಆಯ್ಕೆ ಮಾಡುವುದರ ಮೂಲಕ ಮತದಾರರ ಬದಲಾವಣೆ ಬಯಸಿದ್ದಾನೆ. ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿರುವ ಮತದಾರರು, ಬಿಜೆಪಿ ಬಹುಮತ ನೀಡಿದ್ದಾರೆ.
ಅಷ್ಟಕ್ಕೂ ರಾಜಸ್ಥಾನದಲ್ಲಿ ಕಮಲ ಅರಳಲು ಮತ್ತು ಕಾಂಗ್ರೆಸ್ ಸೋಲಲು ಮುಖ್ಯವಾದ ಕಾರಣಗಳಾದರು ಏನು ಎಂದು ನೋಡುವುದಾದರೇ!
* ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ನಡುವಿನ ರಾಜಕೀಯ ಸಂಘರ್ಷ. ಇದರಿಂದ ಜವಬ್ಧಾರಿ ಮರೆತ ನಾಯಕರು.
* ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಲಹ.
* ಕಾಂಗ್ರೆಸ್ ಪಕ್ಷದ ನಾಯಕರು ಬಂಡೆದ್ದು, ಭಿನ್ನಮತ ಪ್ರದರ್ಶಿಸಿದಾಗ ಗೆಹ್ಲೋಟ್ ಸರಿಯಾಗಿ ನಿಭಾಯಿಸದ್ದು.
* ಸಿಎಂ ಅಶೋಕ್ ಗೆಹ್ಲೋಟ್‌ಗೆ ಇದ್ದ ದುರಹಂಕಾರವೂ ಕಾಂಗ್ರೆಸ್ ಸೋಲಿಗೆ ಮತ್ತು ಬಿಜೆಪಿಯ ಗೆಲುವಿಗೆ ಕಾರಣ ಎನ್ನಲಾಗುತ್ತಿದೆ.
* ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯವು ಗೆಹ್ಲೋಟ್‌ರ ಕಾಂಗ್ರೆಸ್ ಸರ್ಕಾರದ ಮೇಲೆ ಪರಿಣಾಮ ಬೀರಿದೆ.
ಇವೆಲ್ಲಾ ಮುಖ್ಯ ಕಾರಣಗಳೊಂದಿಗೆ, ಇನ್ನು ಅನೇಕ ಕಾರಗಳು ಈ ಬಾರಿ ಕಾಂಗ್ರೆಸ್ ಪಕ್ಷದ ಸೋಲು-ಬಿಜೆಪಿ ಪಕ್ಷದ ಭರ್ಜರಿ ಜಯಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.