ಮಹರಾಷ್ಟ್ರ: ದೇಶದಲ್ಲಿಂದು ಮತ್ತೊಂದು ರೈಲು ದುರಂತ ಸಂಭವಿಸಿದೆ. ಮಹಾರಾಷ್ಟ್ರದ ಗೋಂಡಿಯಾದಲ್ಲಿ ಬುಧವಾರ ನಸುಕಿನ ಜಾವ ಪ್ಯಾಸೆಂಜರ್ ರೈಲು ಹಾಗೂ ಗೂಡ್ಸ್ ರೈಲು ಪರಸ್ಪರ ಡಿಕ್ಕಿಯಾಗಿದ್ದು, ಈ ಹಿನ್ನೆಲೆ 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಪಘಾತಕ್ಕೆ ಪ್ಯಾಸೆಂಜರ್ ರೈಲಿನ ಮೂರು ಬೋಗಿಗಳು ಹಳಿ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದ ಗೋಂಡಿಯಾದಲ್ಲಿ ಬುಧವಾರ ನಸುಕಿನ ಜಾವ 2.30ರ ವೇಳೆಗೆ ಪ್ಯಾಸೆಂಜರ್ ರೈಲು ಹಾಗೂ ಗೂಡ್ಸ್ ರೈಲು ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ಅಪಘಾತವಾಗಿದೆ. ಈ ಹಿನ್ನೆಲೆ ಪ್ರಯಾಣಿಕ ರೈಲಿನಲ್ಲಿದ್ದ 3 ಬೋಗಿಗಳು ಹಳಿ ತಪ್ಪಿದ್ದು, ಈ ಘಟನೆಯಲ್ಲಿ 50 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ, ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರೂ ಪ್ರಾಣ ಕಳೆದುಕೊಂಡಿಲ್ಲ ಎಂದು ತಿಳಿದುಬಂದಿದೆ.
ಹಳಿ ತಪ್ಪಿದ ಪ್ಯಾಸೆಂಜರ್ ರೈಲು ಛತ್ತೀಸ್‌ಗಢದ ಬಿಲಾಸ್ಪುರದಿಂದ ರಾಜಸ್ಥಾನದ ಜೋಧಪುರಕ್ಕೆ ತೆರಳುತ್ತಿತ್ತು. ಇನ್ನು, ಸಿಗ್ನಲ್ ನೀಡುವಲ್ಲಿ ಉಂಟಾದ ಎಡವಟ್ಟಿನಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಪ್ರಯಾಣಿಕ ರೈಲಿನ ಲೋಕೋಪೈಲಟ್ ಎಮರ್ಜೆನ್ಸಿ ಬ್ರೇಕ್ ಅನ್ನು ಹಾಕಿದರೂ ಗೂಡ್ಸ್ ರೈಲಿನ ಜತೆ ಡಿಕ್ಕಿಯಾಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದೂ ಹೇಳಲಾಗಿದೆ. ಆದರೆ, ಬೆಳಗ್ಗಿನ ಜಾವ 4: 30 ರ ವೇಳೆಗೆ ಹಳಿ ತಪ್ಪಿದ ರೈಲಿನ ಬೋಗಿಗಳನ್ನು ಸರಿ ಪಡಿಸಲಾಗಿದೆ. ನಂತರ, ಅಪಘಾತ ನಡೆದ ಸ್ಥಳದಿಂದ ಬೆಳಗ್ಗೆ 5: 24 ರ ವೇಳೆಗೆ ಹೊರಟಿತು ಹಾಗೂ 5:44ಕ್ಕೆ ಗೋಂಡಿಯಾ ರೈಲು ನಿಲ್ದಾಣವನ್ನು ಅಪಘಾತಕ್ಕೊಳಗಾದ ಪ್ರಯಾಣಿಕ ರೈಲು ತೆರಳಿತು ಎಂದೂ ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಹಾಗೂ 5: 45 ರ ವೇಳೆಗೆ ಅಪ್ ಹಾಗೂ ಡೌನ್ ಟ್ರಾಫಿಕ್ ಪುನಾರಂಭವಾಯಿತು ಎಂದೂ ರೈಲ್ವೆ ಇಲಾಖೆ ತಿಳಿಸಿದೆ.
ಎಕ್ಸ್‌ಪ್ರೆಸ್ ರೈಲಿನ 4 ಟೈರ್‌ಗಳು ಟ್ರ್ಯಾಕ್‌ನಿಂದ ಹೊರಕ್ಕೆ ಬಂದು ಈ ಅಪಘಾತವಾಗಿದ್ದು, ಯಾವ ಪ್ರಯಾಣಿಕರಿಗೂ ಗಂಭೀರ ಗಾಯಗಳಾಗಿಲ್ಲ ಎಂದೂ ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ, ರೈಲ್ವೆ ಸುರಕ್ಷತಾ ಆಯುಕ್ತ ಈ ಅಪಘಾತ ಸಂಬಂಧ ತನಿಖೆ ನಡೆಸಲಿದೆ ಎಂದೂ ಹೇಳಿದ್ದಾರೆ.
Maharashtra | More than 50 persons were injured after 3 bogies of a train derailed in Gondia around 2.30 am at night. A collision b/w a goods train & passenger train- Bhagat ki Kothi, due to non-receipt of signal, led to this accident. No deaths were reported.
— ANI (@ANI) August 17, 2022
Maharashtra | More than 50 persons were injured after 3 bogies of a train derailed in Gondia around 2.30 am at night. A collision b/w a goods train & passenger train- Bhagat ki Kothi, due to non-receipt of signal, led to this accident. No deaths were reported.
— ANI (@ANI) August 17, 2022