Mysore
25
broken clouds

Social Media

ಗುರುವಾರ, 08 ಅಕ್ಟೋಬರ್ 2026
Light
Dark

ರಾಜ್ಯಸಭೆಗೆ ನಿತೀಶ್‌ ಕುಮಾರ್‌ ನಾಮಪತ್ರ ಸಲ್ಲಿಕೆ

ಪಾಟ್ನಾ: ಬಿಹಾರದ ಸಿಎಂ ಆಗಿ 10ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ಕೇವಲ ನಾಲ್ಕು ತಿಂಗಳಿನಲ್ಲೇ ನಿತೀಶ್‌ ಕುಮಾರ್‌ ಅವರು ಇಂದು ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದಾರೆ.

ಈ ಮೂಲಕ ಪಾಟ್ನಾದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಅವರ ನಂತರ ರಾಝ್ಯದ ಅತ್ಯುನ್ನತ ಮುಖ್ಯಮಂತ್ರಿ ಹುದ್ದೆಯನ್ನು ಯಾರು ಅಲಂಕರಿಸಲಿದ್ದಾರೆ ಎಂಬ ಕುತೂಹಲ ತೀವ್ರಗೊಂಡಿದೆ.

ಕೇಂದ್ರ ಸಚಿವ ಅಮಿತ್‌ ಶಾ, ಡಿಸಿಎಂ ಸಾಮ್ರಾಟ್‌ ಚೌಧರಿ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಇತರ ಅಭ್ಯರ್ಥಿಯೊಂದಿಗೆ ಆಗಮಿಸಿದ ನಿತೀಶ್‌ ಕುಮಾರ್‌, ರಾಜ್ಯ ವಿಧಾನಸಭೆಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು.

ನವೆಂಬರ್.‌20, 2025ರಂದು ಭರ್ಜರಿ ಜಯದ ಬಳಿಕವಷೇ ಸಿಎಂ ಆಗಿದ್ದ ನತೀಶ್‌ ಅವರ ಈ ಹಠಾತ್‌ ನಡೆ ಬಿಹಾರದ ರಾಜಕೀಯ ಸಮೀಕರಣವನ್ನು ಬದಲಿಸುವ ಮುನ್ಸೂಚನೆ ನೀಡಿದೆ.

Tags:
error: Content is protected !!