Mysore
35
scattered clouds

Social Media

ಸೋಮವಾರ, 11 ಮೇ 2026
Light
Dark

ʻಪ್ರೀತಿ ಎಲ್ಲಕ್ಕಿಂತ ಶಕ್ತಿಶಾಲಿʼ ವಿಜಯ್‌ ಮುಖ್ಯಮಂತ್ರಿ ಆದ ಬೆನ್ನಲ್ಲೇ ತ್ರಿಶಾ ಪೋಸ್ಟ್‌

ಚೆನ್ನೈ : ಜೋಸೆಫ್‌ ವಿಜಯ್ ತಮಿಳುನಾಡಿನ 9ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ಅವರ ಆಪ್ತ ಸ್ನೇಹಿತೆ, ನಟಿ ತ್ರಿಷಾ ಕೃಷ್ಣನ್ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ಕುರಿತು ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

ಭಾನುವಾರ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ನೀಲಿ ಬಣ್ಣದ ರೇಷ್ಮೆ ಸೀರೆಯುಟ್ಟು ಆಗಮಿಸಿದ ತ್ರಿಷಾ ಎಲ್ಲರ ಗಮನ ಸೆಳೆದರು. ಸಮಾರಂಭದಲ್ಲಿ ಕ್ಲಿಕ್ಕಿಸಿಕೊಂಡ ಚಿತ್ರಗಳನ್ನು ಹಂಚಿಕೊಂಡಿರುವ ಅವರು, “ಪ್ರೀತಿ ಎಲ್ಲಕ್ಕಿಂತ ಶಕ್ತಿಶಾಲಿ”( the love is always louder) ಎಂದು ಬರೆದುಕೊಂಡಿದ್ದಾರೆ.

ವಿಜಯ್‌ ಅವರು ಪ್ರಮಾಣ ವಚನ ಸ್ವೀಕರಿಸುವಾಗ ತಾಯಿ ಉಮಾ ಕೃಷ್ಣನ್ ಜೊತೆಗೂಡಿ ಆಗಮಿಸಿದ ತ್ರಿಷಾ, ವೇದಿಕೆಯ ಮುಂಭಾಗದ ಆಸನದಲ್ಲಿ ಕುಳಿತು ಪ್ರಮಾಣವಚನವನ್ನು ಕಣ್ಣು ತುಂಬಿಕೊಂಡರು.

ಸಮಾರಂಭದ ಬಳಿಕ ಎನ್‌ಡಿಟಿವಿ ಜೊತೆ ಮಾತನಾಡಿದ ತ್ರಿಷಾ, ‘ತುಂಬಾ ಖುಷಿಯಾಗಿದೆ, ಕಂಗ್ರಾಜುಲೇಷನ್ಸ್’ ಎಂದು ವಿಜಯ್‌ಗೆ ಶುಭ ಕೋರಿದರು. ಇದೇ ವೇಳೆ ‘ವಿಜಯ್‌ಗೆ ಬೆಂಬಲ ನೀಡಿದ ತಮಿಳುನಾಡು ಜನತೆಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದರು.

ʼಗಿಲ್ಲಿ’, ‘ತಿರುಪಾಚಿ’, ‘ಆದಿ’, ‘ಕುರುವಿ’, ‘ಲಿಯೋ’ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿರುವ ವಿಜಯ್-ತ್ರಿಷಾ ತಮಿಳು ಚಿತ್ರರಂಗದ ಹಿಟ್ ಜೋಡಿ. ಇಬ್ಬರ ನಡುವೆ ಆತ್ಮೀಯ ಸ್ನೇಹ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಪ್ರಮಾಣವಚನ ಸಮಾರಂಭದಲ್ಲಿ ತ್ರಿಷಾ ಉಪಸ್ಥಿತಿ, ವಿಜಯ್ ಕುಟುಂಬದ ಜೊತೆಗಿನ ಒಡನಾಟ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಯಿತು.

108 ಸ್ಥಾನ ಗೆದ್ದು ಏಕೈಕ ದೊಡ್ಡ ಪಕ್ಷವಾದ ಟಿವಿಕೆ, ಕಾಂಗ್ರೆಸ್ ಸೇರಿ ಮಿತ್ರಪಕ್ಷಗಳ ಬೆಂಬಲದೊಂದಿಗೆ 120 ಶಾಸಕರ ಬಲದಿಂದ ಸರ್ಕಾರ ರಚಿಸಿದೆ. ‘ಇದು ನಿಜವಾದ ಜಾತ್ಯತೀತ, ಸಾಮಾಜಿಕ ನ್ಯಾಯದ ಹೊಸ ಯುಗದ ಆರಂಭ’ ಎಂದು ವಿಜಯ್ ಮೊದಲ ಭಾಷಣದಲ್ಲಿ ಘೋಷಿಸಿದರು.

Tags:
error: Content is protected !!