ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಭಾಗವಹಿಸಿದರು.
ಈ ವೇಳೆ ಅವರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದರು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸಾಥ್ ನೀಡಿದರು.
ಇದಕ್ಕೂ ಮುನ್ನ ತ್ರಿವೇಣಿ ಸಂಗಮದಲ್ಲಿ ಕೆಲಕಾಲ ಸಂಚರಿಸಿದ ಮೋದಿ ಕುಂಭಮೇಳದಲ್ಲಿ ನೀಡಲಾದ ವಿವಿಧ ಸೌಕರ್ಯಗಳ ಬಗ್ಗೆ ವಿವರ ಪಡೆದರು.
ಪ್ರಯಾಗ್‌ರಾಜ್‌ಗೆ ಮೋದಿ ಆಗಮಿಸಿದ್ದ ಹಿನ್ನೆಲೆ ಭಾರಿ ಭದ್ರತೆಯ ವ್ಯವಸ್ಥೆ ಮಾಡಲಾಗಿತ್ತು.
ಫೆಬ್ರುವರಿ 26 ರಂದು ಮಹಾಕುಂಭಮೇಳಕ್ಕೆ ತೆರೆ ಬೀಳಲಿದೆ.