ವಾಷಿಂಗ್ಟನ್: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತ ಸಹಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ವಾಷಿಂಗ್ಟನ್‌ನ ಉತಾಹ್ ಕಾಲೇಜಿನ ಆವರಣದಲ್ಲಿ ಈ ಘಟನೆ ನಡೆದಿದೆ. ಭಾಷಣ ಮಾಡುತ್ತಿದ್ದಾಗ ಅವರ ಮೇಲೆ ಗುಂಡು ಹಾರಿಸಲಾಗಿದೆ. ಅವರ ಕುತ್ತಿಗೆ ಭಾಗಕ್ಕೆ ಗುಂಡು ತಗುಲುತ್ತಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ನಿನ್ನೆ ಉತಾಹ್ ವ್ಯಾಲಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 31 ವರ್ಷದ ಬಲಪಂಥೀಯ ಟಾಕ್ ಶೋ ನಿರೂಪಕ ಮತ್ತು ರಾಜಕೀಯ ಕಾರ್ಯದರ್ಶಿ ಚಾರ್ಕಿ ಕಿರ್ಕ್ ಮೇಲೆ ಗುಂಡು ಹಾರಿಸಲಾಗಿದೆ.
ಈ ಘಟನೆ ನಡೆದಾಗ ಕಿರ್ಕ್ ತಮ್ಮ ರಾಷ್ಟ್ರೀಯ ಭಾಷಣ ಸರದಿ ದಿ ಅಮೇರಿಕನ್ ಕಮ್ಬ್ಯಾಕ್ ಟೂರ್ ಅನ್ನು ಪ್ರಾರಂಭಿಸಲು ಕ್ಯಾಂಪಸ್‌ನಲ್ಲಿದ್ದರು. ಅವರ ಪ್ರವಾಹದ ಸುತ್ತಲಿನ ಉದ್ವಿಗ್ನತೆಯ ಮಧ್ಯೆಯೇ ಗುಂಡಿನ ದಾಳಿ ನಡೆದಿದೆ.
ಇನ್ನು ಚಾರ್ಲಿ ಕಿರ್ಕ್ ಹತ್ಯೆಯ ಕುರಿತು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿದ್ದು, ಅಮೇರಿಕಾದ ಮೌಲ್ಯಗಳಿಗೆ ತಮ್ಮನ್ನು ತಾವು ಮುಡುಪಾಗಿಟ್ಟಿದ್ದ ವಾಕ್ ಸ್ವಾತಂತ್ರ್ಯ ಪೌರತ್ವ ಕಾನೂನಿನ ನಿಯಮ ಮತ್ತು ದೇಶಭಕ್ತಿಯ ಭಕ್ತಿ ಹಾಗೂ ದೇವರ ಪ್ರೀತಿಯ ಮೌಲ್ಯಗಳಿಗೆ ಸಮರ್ಪಿಸಿಕೊಂಡಿದ್ದ ಚಾರ್ಲಿ ಅವರ ಹತ್ಯಾಕಾಂಡಕ್ಕೆ ಎಲ್ಲಾ ಅಮೇರಿಕನ್ನರು ಸಂತಾಪ ಸೂಚಿಸಬೇಕು. ಅವರ ನಡೆ ನುಡಿ ಕೆಲಸಗಳನ್ನು ಪಾಲಿಸಿಕೊಂಡು ಹೋಗುವಂತೆ ಕೇಳಿಕೊಂಡಿದ್ದಾರೆ.
ಇನ್ನು ಚಾರ್ಲಿ ಕಿರ್ಕ್ ಹತ್ಯೆ ಗೌರವಾರ್ಥವಾಗಿ ಅಮೇರಿಕಾದ ಧ್ವಜಗಳನ್ನು ಅರ್ಧಕ್ಕೆ ಇಳಿಸುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ.





