Mysore
21
overcast clouds

Social Media

ಸೋಮವಾರ, 07 ಅಕ್ಟೋಬರ್ 2024
Light
Dark

ಕಾಡ್ಗಿಚ್ಚು, ಅರಣ್ಯ ಸಂರಕ್ಷಣೆ: ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಮಾರ್ಗಸೂಚಿ ಬಿಡುಗಡೆ

ನವದೆಹಲಿ: ಅರಣ್ಯ ಸಂರಕ್ಷಣೆ ಹಾಗೂ ಕಾಡ್ಗಿಚ್ಚಿಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆ ವತಿಯಿಂದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಕಾಡ್ಗಿಚ್ಚು ಮತ್ತು ಅರಣ್ಯದಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪಗಳನ್ನು ತಡೆಗಟ್ಟಲು, ಅರಣ್ಯ ಸಂರಕ್ಷಣೆ ಮಾಡಲು ಅರಣ್ಯ ಇಲಾಖೆ ಸಮೀಪ ಅಗತ್ಯ ಸಿಬ್ಬಂದಿ, ಸಂಪನ್ಮೂಲ ಇಲ್ಲದಿದ್ದಾಗ ಸರ್ಕಾರದ ಇತರ ಇಲಾಖೆಗಳ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಆದೇಶಿಸಿದೆ.

ಎನ್‌ಡಿಆರ್‌ಎಫ್‌ಗೆ ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಅರಣ್ಯ ಇಲಾಖೆಗಳ ಹತ್ತಿರ ಅಗತ್ಯ ಸೌಕಾರ್ಯ ಇಲ್ಲದಿದ್ದಾಗ ಏನು ಮಾಡಬೇಕು ಎಂಬುದರ ಬಗ್ಗೆ ಸಲಹೆ ಕೇಳಿ ಪತ್ರ ಬರೆದಿದ್ದರು. ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಂಡ ಪರಿಸರ ಇಲಾಖೆ ಕಳೆದ ತಿಂಗಳು ಸಭೆ ನಡೆಸಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಅರಣ್ಯ ವಿಕೋಪಗಳ ಸಂದರ್ಭಗಳಲ್ಲಿ ಕಾಡಿನ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆ ಕುರಿತಂತೆ ಕೂಡಲೇ ಕ್ರಮದ ಅವಶ್ಯಕತೆ ಇದೆ. ಹೀಗಾಗಿ ಸರ್ಕಾರದ ಇತರ ಇಲಾಖೆಗಳು ಕಾಡಿನಲ್ಲಿ ಫೈರ್‌ ಲೈನ್‌ ಸ್ಥಾಪನೆ ಹಾಗೂ ನಿರ್ವಹಣೆ, ಚೆಕ್‌ಡ್ಯಾಮ್‌, ನೀರಿನ ಟ್ಯಾಂಕ್‌ ಹಾಗೂ ಟ್ರೆಂಚ್‌ಗಳನ್ನು ನಿರ್ಮಾಣ ಮಾಡಬಹುದು. ಅಲ್ಲದೇ ತುರ್ತು ಸನ್ನಿವೇಶಗಳಲ್ಲಿ ಇತರ ಇಲಾಖೆಗಳ ತಂತ್ರಜ್ಞರ ನೆರವಿನೊಟ್ಟಿಗೆ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. ಜೊತೆಗೆ ತುರ್ತು ಕೆಲಸಗಳು ಅರಣ್ಯ ಮತ್ತು ವನ್ಯಜೀವಿಗಳಿಗೆ ಹಾನಿ ಮಾಡುವಂತಿಲ್ಲ ಎಂದು ಹೇಳಿದೆ.

Tags: