ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರಿನ ಹೊರವಲಯದಲ್ಲಿರುವ ಪಯಣ- ವಿಂಟೇಜ್ ಕಾರು ಸಂಗ್ರಹಾಲಯದಲ್ಲಿ ಪಯಣೋತ್ಸವ ಶೀರ್ಷಿಕೆಯಡಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸೆ.೨೨ರ ಸೋಮವಾರ ಪಯಣೋತ್ಸವಕ್ಕೆ ಚಾಲನೆ ದೊರಕಿದ್ದು, ಅ. ೨ರವರೆಗೆ ೧೧ ದಿನಗಳವರೆಗೆ ವಿಶಿಷ್ಟ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪಯಣೋತ್ಸವವು ಕಲೆ, ಸಂಸ್ಕೃತಿ, ಪರಂಪರೆ ಮತ್ತು ನವೀನತೆಯ ಸಮ್ಮಿಲನವಾಗಿದೆ. ಇದು ದಸರಾ ಹಬ್ಬದ ಸಂಭ್ರಮವನ್ನು ವಿಸ್ತರಿಸಿ, ಸಾರ್ವಜನಿಕರಿಗೆ ಕಲಾತ್ಮಕ ಅನುಭವ ನೀಡುವ ಉದ್ದೇಶದಿಂದ ರೂಪಿಸಲಾಗಿದೆ.
ಇದನ್ನೂ ಓದಿ :- https://andolana.in/mysore-dasara-2025/mysuru-dasara-painting-exhibition-kicks-off/
ಸೆ.೨೨-೨೩ರವರೆಗೆ ರಂಗ ಶಿವ ಕಲಾಬಳಗದ ವತಿಯಿಂದ ರಂಗ-ಗೀತ-ವೈಭವ ರಂಗ ಸಂಗೀತದ ಸಮ್ಮಿಲನ. ೨೦ಕ್ಕೂ ಹೆಚ್ಚು ಕಲಾವಿದರು ರಂಗಗೀತೆಗಳ ಮೂಲಕ ಪ್ರೇಕ್ಷಕರ ಮನರಂಜನೆ ಮಾಡಲಿದ್ದಾರೆ. ಸೆ.೨೪ ರಿಂದ ೨೯ರವರೆಗೆ ವಾದ್ಯ ಸಂಗೀತ ವೈಭವ, ಸಂಗ್ರಹಾಲಯದ ಒಳಾಂಗಣದಲ್ಲಿ ನಾದಪೂರ್ಣ ವಾದ್ಯ ಕಾರ್ಯಕ್ರಮಗಳು ನಡೆಯಲಿವೆ. ಸೆ.೩೦ ರಿಂದ ಅ.೧ರವರೆಗೆ ಕಲಾ ವೈಭವ ತಂಡದಿಂದ ನಾಟ್ಯ ವೈಭವ, ಉಜಿರೆಯ ಪ್ರಸಿದ್ಧ ನೃತ್ಯ ತಂಡದಿಂದ ನೃತ್ಯ ಪ್ರದರ್ಶನವಿದ್ದು, ನೃತ್ಯ, ಭಾವ ಮತ್ತು ಶೈಲಿಯ ಸಮ್ಮಿಲನವಾಗಿದೆ.
ಪ್ರತಿದಿನ ಸಂಜೆ ೬ ರಿಂದ ೯ರವರೆಗೆ ದಸರಾ ವಿಶೇಷ ದಿನಗಳಲ್ಲಿ ಸಂಗ್ರಹಾಲಯ ರಾತ್ರಿ ೮ ಗಂಟೆಯವರೆಗೆ ಸಾರ್ವಜನಿಕರಿಗೆ ತೆರೆಯಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.





