ಮೈಸೂರು : ಹೊರವಲಯದ ಉತ್ತನಹಳ್ಳಿಯ ಬಳಿ ನಡೆಯುತ್ತಿರುವ ʻಯುವ ದಸರಾʼದ ಮೊದಲ ದಿನವಾದ ಭಾನುವಾರ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಡುಗಳು ಪ್ರೇಕ್ಷಕರನ್ನು ಮೋಡಿ ಮಾಡಿದವು. ಸೊಂಪಾದ ಆಲಾಪ, ಹುಚ್ಚೆದ್ದು ಕುಣಿಸುವ ಹಾಡುಗಳ ಮಿಶ್ರಣವು ಪ್ರೇಕ್ಷಕರಿಗೆ ಮುದ ನೀಡಿದೆ.
ಇದನ್ನು ಓದಿ : Mysuru dasara | ಅರಮನೆಯಲ್ಲಿ ಥೈಕ್ಕುಡಂ ಬ್ರಿಡ್ಜ್ ಸಂಗೀತದ ಹೊಳೆ
ವೇದಿಕೆ ಮೇಲೆ ನೃತ್ಯಗಾರ್ತಿಯರು ನೃತ್ಯ ಪ್ರದರ್ಶಿಸುತ್ತಿದ್ದಂತೆ ಆಕಾಶದಲ್ಲಿ ಬಾಣಬಿರುಸುಗಳನ್ಬು ಸಿಡಿಸುತ್ತಿದ್ದಂತೆ ಅರ್ಜುನ್ ಜನ್ಯ ಎಂಟ್ರಿಕೊಟ್ಟರು. ಬಳಿಕ ಕನ್ನಡ ಚಿತ್ರರಂಗಕ್ಕೆ ಮೈಸೂರಿನ ಕೊಡುಗೆ ಅಪಾರ ಎನ್ನುತ್ತಲೇ ಮಾತು ಶುರುಮಾಡಿದ ಅರ್ಜುನ್ಯ ಜಗವೇ ನೀನು ಗೆಳತಿಯೇ ನನ್ನ ಜೀವದ ಒಡತಿಯೇ… ಊಸಿರೇ ನೀನು ಗೆಳತಿಯೇ…. ಹಾಡನ್ನು ಹಾಡುತ್ತಿದ್ದಂತೆ ಎದುರುಗಡೆ ಇದ್ದ ಸಹಸ್ರಾರು ಜನರು ದನಿಗೂಡಿಸಿದರು. ಬಳಿಕ ಒಂದೂವರೆ ಗಂಟೆಗಳ ಕಾಲ ತಮ್ಮದೇ ಸಂಗೀತ ರಚನೆಯ ಹಾಡುಗಳನ್ನು ಹಾಡಿ ಮೋಡಿ ಮಾಡಿದರು.
ನಂತರ, ಗಾಯಕ ಸುನೀಲ್- ನೀ ನಗೊವರೆಗೂ ನಿನ್ನೆ ಮೊನ್ನೆವರೆಗೂ ಸೊನ್ನೆಯಾಗಿದ್ದೇನಾ, ನಿನ್ನ ಕಂಡು ಮರೆತೆ ನನ್ನ ನಾ… ಮೈಸೂರಿನ ಪ್ರತಿಭೆ ಗಾಯಕರಾದ ಇಂದು ನಾಗರಾಜ್ ಅವರು ಅರಳದ ಮಲ್ಲಿಗೆ ಬಾಡಿತೆ ಮೆಲ್ಲಗೆ ಅಳುತಿದೆ ತುಸು ಮೆಲ್ಲಗೆ ಹಾಡನ್ನು ಹಾಡಿದರೆ, ಮತ್ತೊಬ್ಬ ಗಾಯಕಿ ಐಶ್ವರ್ಯ ರಂಗರಾಜನ್ ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಹಾಡು ಹೇಳುವ ಮೂಲಕ ಕುಣಿಯುವಂತೆ ಮಾಡಿದರು.





