Mysore
21
broken clouds

Social Media

ಭಾನುವಾರ, 03 ನವೆಂಬರ್ 2024
Light
Dark

ಯುವ ದಸರೆಯಲ್ಲಿ ʻಬಾದ್‌ಷಾʼ ಅಬ್ಬರ; ರ‍್ಯಾಪ್‌ ತಾಳಕ್ಕೆ ಕುಣಿದ ಮೈಸೂರು

ಬಿಂದಾಸ್ ಬಾಲಿವುಡ್ ನೈಟ್ಸ್ ಗೆ ಕಿಕ್ಕಿರಿದು ಸೇರಿದ ಜನ ಸಾಗರ…..

ದ್ವಾಪರಕ್ಕೆ ಕರೆದೊಯ್ದ ಜಸ್ ಕರಣ್  ಕಂಠ…..

ಮೈಸೂರು: ಯುವ ದಸರಾದ ಮೂರನೇ ದಿನವಾದ ಮಂಗಳವಾರ ರಾತ್ರಿ ಬಿಂದಾಸ್‌ ಬಾಲಿವುಡ್‌ ನೈಟ್ಸ್‌ನ ʻಬಾದ್‌ಷಾʼ ತಾಳಕ್ಕೆ ಮೈಸೂರಿನ ಜನತೆ ಹುಚ್ಚೆದ್ದು ಕುಣಿದರು. ಜಸ್ಕರಣ್‌ ಸಿಂಗ್‌, ಸಂಗೀತ ರವೀಂದ್ರನಾಥ ಅವರ ಗಾಯನವು ಯುವಜನರನ್ನು ಮೋಡಿ ಮಾಡಿತು.

ನಮಸ್ಕಾರ ಮೈಸೂರು ಎನ್ನುತ್ತಲೇ ವೇದಿಕೆ ಮೇಲೆ ಬಂದ ಬಾಲಿವುಡ್ ನ ಖ್ಯಾತ ಗಾಯಕ ಆದಿತ್ಯ ಪ್ರತೀಕ್‌ ಸಿಂಗ್‌ ಅಲಿಯಾಸ್ ʼಬಾದ್ ಷಾʼ ತಮ್ಮ ರ‍್ಯಾಪ್‌ ಹಾಡುಗಳನ್ನು ಪೇಕ್ಷಕರ ಹೃದಯಕ್ಕೆ ನಾಟಿಸಿದರು.

ʻಹೇ ಲಡ್ಕಿ ಬ್ಯೂಟಿ ಫುಲ್ ಗರ್ಕೆ ಚುಲ್ʻ ʻಮೇ.ಪಾನಿ ಪಾನಿ ಹೋಗಾಯಿ ʻಇಕು ಹೋಗಯ್ ಹಮಾ ಹಮಾʼ ಹೀಗೆ ಮೊದಲಾದ ತನ್ನ ಆಲ್ಬಮ್ ಗೀತೆಗಳನ್ನು ಪ್ರಸ್ತುತಪಡಿಸಿದರು. ಇದಕ್ಕೆ ಪ್ರಕ್ಷೇಕರು ಕೂತಲ್ಲೇ ಹಾಡುತ್ತಾ, ಕುಣಿಯುತ್ತ, ಎದೆ ಜೆಲ್ ಎನಿಸುವ ಸೌಂಡ್ಸ್ ಗೆ ಹೆಚ್ಚೆ ಹಾಕಿದರು.

ʻನಾನು ಗಾಯಕನಲ್ಲ ನಾನೊಬ್ಬ ಬರಹಗಾರʼ ಎಂದು ಕನ್ನಡದಲ್ಲಿ ಮಾತನಾಡಿದ ಬಾದ್ ಷಾ ನನ್ನ ಭಾವನೆಯನ್ನು ಬರೆದು ಹಾಡುತ್ತೇನೆ ಎಂದು ಹೇಳುವ ಮೂಲಕ ಕನ್ನಡಿಗರ ಮನಗೆದ್ದರು. ಪುನೀತ್ ರಾಜ್ ಕುಮಾರ್ ಅವರ ನೀನೇ ರಾಜ ಕುಮಾರ ಗೀತೆಯ ಮೂಲಕ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಮರ್ಪಿಸಿದರು.

ಇನ್ನೂ ಇದಕ್ಕೂ ಮುನ್ನ ಯುವ ಗಾಯಕ ಸರಿಗಮಪ ಖ್ಯಾತಿಯ ಜಸ್ ಕರಣ್ ಸಿಂಗ್ ಕನ್ನಡದ ಗೀತೆಗಳನ್ನು ಹಾಡಿ ಮಾಧುರ್ಯ ಹೆಚ್ಚಿಸಿದರು.

ʻಮರುಭೂಮಿ ನಡುವೆʼ ʼಜಗವೇ ನೀನು ಗೆಳತಿಯೇʼ ಎಂದು ವೇದಿಕೆ ಮೇಲೆ ಬಂದ ಜಸ್ಕರಣ್‌ ಪ್ರಸಿದ್ಧ ಕನ್ನಡದ ಹಾಡುಗಳಿಗೆ ಧ್ವನಿಯಾದರು. ʻನೆನ್ನೆ ತನಕ ತಿಳಿಯದು ಪ್ರೇಮದ ದಾರಿʼ ಹಾಗೂ ಕನ್ನಡ ಚಲಚಿತ್ರರಂಗದ ಗಣೇಶ್ ಅವರ ʻದ್ವಾಪರ ದಾಟುತ ನಿನ್ನನೆ ನೋಡಲು ಬಂದ ರಾಧಿಕೇʼ ಎಂಬ ಗೀತೆಯ ಮೂಲಕ ಮೈಸೂರಿಗರನ್ನು ಮತ್ತೊಮ್ಮೆ ದ್ವಾಪರಕ್ಕೆ ಕರೆದೊಯ್ದರು.

ಮೈಸೂರಿನ ಹಿನ್ನೆಲೆ ಗಾಯಕಿ ಸಂಗೀತ ರವೀಂದ್ರನಾಥ್ ಅವರ ಮಸಾಲೆ ಹಾಡುಗಳು ಪ್ರೇಕ್ಷಕರ ಹುಕ್‌ ಸ್ಟೇಕ್‌ಗೆ ಕಿಚ್ಚು ಹಚ್ಚಿತು. ಬೆಳಕಿನ ಕವಿತೆ ಬೆಳಗಿಗೆ ಸೋತೆ ಎಂದು ಹಾಡುತ್ತಾ ಯುವ ಸಮೂಹ ಮನದಲ್ಲಿ ಪ್ರೇಮದ ಪುಳಕವನ್ನು ಹೆಚ್ಚಿಸಿದರು.

ತಾಯಿಗೆ ತಕ್ಕ ಮಗ ಚಿತ್ರದ ʻಹೃದಯಕೆ ಹೆದರಿಕೆʼ ಕಿರಿಕ್ ಪಾರ್ಟಿ ಚಿತ್ರದ ʻತೂಗು ಮಂಚದಲ್ಲಿ ಕೂತುʼ ರಾಬರ್ಟ್ ಚಿತ್ರದ ʻಕಣ್ಣು ಹಿಡಿಯೋಕ್ಕ ನೆನ್ನೇ ಕಲಾತಾನಿ ನಿನ್ನ ನೋಡಿ ಸುಮ್ನೆ ಹೆಂಗ್ ಇರ್ಲಿʼ ರನ್ನ ಚಿತ್ರದ ʻನನ್ನ ಮನಸು ಹಾಡಿದೆ ತಿಥಲಿ ತಿಥಲಿʼ ಶರಣ ಚಿತ್ರದ ʻಹೋನೆ ಹೊನೇʼ ಖುಷಿ ಚಿತ್ರದ ಕಳ್ಳ ಚಂದಾಮಮ್ಮ ಅಂದ ಚಂದ ಪ್ರೇಮ, ಅಣ್ಣಾಬಾಂಡ್ ಚಿತ್ರದ ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನೂ, ಆಕಸ್ಮಿಕ ಚಿತ್ರದ ಹೇ ಹೇ ರಾಜು ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟ ಬೇಕು ಎಂದು ಮೈಸೂರು ಯುವ ಜನತೆಯ ಮನ ಸೆಳೆದು ಕುಣಿದು ಕುಪ್ಪಲಿಸುವಂತೆ ಮಾಡಿದರು.

Tags: