ಮೈಸೂರು: ಉಪಜಾತಿ ಕಾಲಂನಲ್ಲಿ ಮಾದಿಗ ಎಂದು, ಧರ್ಮದ ಕಾಲಂನಲ್ಲೂ ಹಿಂದೂ ಧರ್ಮ ಎಂದು ಬರೆಸಿ ಎಂದು ವಿಧಾನಪರಿಷತ್ ಸದಸ್ಯ ಡಾ.ತಿಮ್ಮಯ್ಯ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ನಿಧನಕ್ಕೆ ಮೊದಲಿಗೆ ಸಂತಾಪ ಸಲ್ಲಿಸುತ್ತೇವೆ. ಅವರ ನಿಧನ ಇಡೀ ರಾಜ್ಯ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟ ಎಂದು ಭೈರಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.
ಇದನ್ನು ಓದಿ : ಒಳ ಮೀಸಲಾತಿ ವರದಿ ಜಾರಿ-ಗೊಂದಲಗಳಿಗೆ ದಾರಿ
ಬಳಿಕ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಯುತ್ತಿದೆ. ನಾಗಮೋಹನ್ ದಾಸ್ ನೇತೃತ್ವ ಒಳ ಮೀಸಲಾತಿ ಸಮೀಕ್ಷೆಯಲ್ಲಿ ತಾವೆಲ್ಲರೂ ಮಾಹಿತಿ ನೀಡಿದ್ದೀರಾ. ಇದೀಗ ಮತ್ತೆ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಪ್ರಾರಂಭ ಆಗಿದೆ. ಈ ಸಮೀಕ್ಷೆಯಲ್ಲಿ ಮಾದಿಗ ಸಮುದಾಯ ಭಾಗಿಯಾಗಬೇಕು. ಸಮೀಕ್ಷೆಗೆ ವೇಳೆ ಅಧಿಕಾರಿಗಳು ಬಂದಾಗ ಎಲ್ಲಾ ಮಾಹಿತಿಗಳನ್ನು ನೀಡಿ. ಬಿ-061 ಕಾಲಂನಲ್ಲಿ ಎಲ್ಲರೂ ಮಾದಿಗ ಸಮುದಾಯ ಎಂದು ಬರೆಸಬೇಕು.
ಉಪಜಾತಿ ಕಾಲಂನಲ್ಲೂ ಮಾದಿಗ ಎಂದೇ ಬರೆಯಿಸಿ. ಧರ್ಮದ ಕಾಲಂನಲ್ಲಿ ಹಿಂದೂ ಧರ್ಮ ಅಂತಲೇ ಬರೆಸಬೇಕು. ಈ ಸಮೀಕ್ಷೆ ನಮ್ಮ ಅಳಿವು ಉಳಿವಿನ ಪ್ರಶ್ನೆ. ಈ ಸಮೀಕ್ಷೆಯಲ್ಲಿ ನಮ್ಮ ಸಮಾಜದ ಪರಿಸ್ಥಿತಿ ಹೇಗಿದೆ ಎಂಬುದು ಗೊತ್ತಾಗುತ್ತದೆ ಎಂದು ಮನವಿ ಮಾಡಿದರು.





