ಮೈಸೂರು : ನೀವು ಅಕ್ರಮವಾಗಿ ಹಣಕಾಸು ವ್ಯವಹಾರದಲ್ಲಿ ತೊಡಗಿದ್ದೀರಿ ಎಂದು ಪೊಲೀಸರ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಬೆದರಿಸಿದ ದುಷ್ಕರ್ಮಿಗಳು ಅವರ ಖಾತೆಯಿಂದ 10 ಲಕ್ಷ ರೂ. ಹಣವನ್ನು ವರ್ಗಾಯಿಸಿ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಹೆಬ್ಬಾಳು ನಿವಾಸಿ ಹಾಗೂ ಇಂಜಿನಿಯರ್ ಆಗಿರುವ ವ್ಯಕ್ತಿಗೆ ಅಪರಿಚಿತನೋರ್ವ ಕರೆ ಮಾಡಿದ್ದಾನೆ. ನಂತರ ನೀವು ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದೀರಿ ಎಂದು ಬೆರದಿಸಿದ್ದಾನೆ.
ನಿಮ್ಮ ಖಾತೆಗೆ ಕೋಟ್ಯಾಂತರ ರೂ. ಹಣ ಬಂದಿದೆ ಎಂದು ಬೆದರಿಸಿದ್ದಾನೆ. ನಂತರ ವ್ಯಕ್ತಿಯ ಬ್ಯಾಂಕ್ ಖಾತೆಯ ವಿವರವನ್ನು ಪಡೆದಿದ್ದಾನೆ. ಗೊಂದಲದಲ್ಲಿ ಇದ್ದ ಅವರು ಆತ ಹೇಳಿದ ವಿವರ ನೀಡಿದ್ದಾರೆ.
ಇದನ್ನೂ ಓದಿ:-ಗುಂಡ್ಲುಪೇಟೆ | ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆ ; ಕೊಲೆಯಲ್ಲಿ ಅಂತ್ಯ
ಕೆಲ ಹೊತ್ತಿನ ಬಳಿಕ ಅವರ ಖಾತೆಯಿಂದ 10 ಲಕ್ಷ ರೂ. ಹಣ ಬೇರೆಯವರ ಖಾತೆಗೆ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ಆತಂಕಗೊಂಡ ಅವರು ಕೂಡಲೇ ಸೈಬರ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.





