Mysore
33
broken clouds

Social Media

ಶುಕ್ರವಾರ, 15 ಮೇ 2026
Light
Dark

ಡಿ.ಕೆ.ಶಿವಕುಮಾರ್‌ ಜನ್ಮದಿನಾಚರಣೆ : ರಾರಾಜಿಸಿದ ಮುಂದಿನ ಮುಖ್ಯಮಂತ್ರಿ ಡಿಕೆಶಿ ಬ್ಯಾನರ್‌ಗಳು

ಬೆಂಗಳೂರು : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ 64ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಶುಭ ಹಾರೈಸಲು ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳ ದಂಡೇ ನೆರೆದಿತ್ತು. ನಿನ್ನೆ ರಾತ್ರಿಯಿಂದಲೇ ಸಂಭ್ರಮಾಚರಣೆ ಶುರುವಾಗಿದ್ದು, ಇಂದು ಇಡೀ ದಿನ ಶುಭ ಹಾರೈಕೆಗಳು ಪೂಜೆ ಉಡುಗೊರೆಗಳ ವಿನಿಮಯವಾಗಿದೆ. ನಿನ್ನೆ ರಾತ್ರಿ ಅಭಿಮಾನಿಗಳು ಬೆಳ್ಳಿಯ ಜೋಡಿ ಆನೆ ಪ್ರತಿಕೃತಿಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ಉಡುಗೊರೆ ನೀಡಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್‍ಗೌಡ ಹಾಗೂ ಇತರರು ವ್ಯವಸ್ಥೆ ಮಾಡಿದ್ದ ಬೃಹತ್ ಕೇಕ್ ಅನ್ನು ಡಿ.ಕೆ.ಶಿವಕುಮಾರ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು. ಇಂದು ಬೆಳಗ್ಗೆ ದೇವಸ್ಥಾನಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಪುರೋಹಿತರ ನಿಯೋಗ ಡಿ.ಕೆ.ಶಿವಕುಮಾರ್ ಅವರ ಮನೆ ಬಳಿ ಬಂದು ಆಶೀರ್ವವದಿಸಿದರು.

ಶುಭ ಹಾರೈಸಲು ಕಾರ್ಯಕರ್ತರು ಹಾಗೂ ಮುಖಂಡರ ದಂಡೇ ನೆರೆದಿತ್ತು. ಸದಾಶಿವನಗರದ ಮನೆಯ ಸುತ್ತಮುತ್ತ ಇದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು.

ಸದ್ದು ಮಾಡಿದ ಮುಖ್ಯಮಂತ್ರಿ ಹುದ್ದೆ
ಹುಟ್ಟುಹಬ್ಬದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡುವ ಮೂಲಕ ಹೈಕಮಾಂಡ್ ಕೊಡುಗೆ ನೀಡಬಹುದೆಂದು ಕಾರ್ಯಕರ್ತರು ನಿರೀಕ್ಷಿಸಿದ್ದರು. ಆದರೆ ಅದು ಈಡೇರಿಲ್ಲ.
ಬೆಳಗಾವಿಯಲ್ಲಿ ಅಳವಡಿಸಲಾಗಿರುವ ಬ್ಯಾನರ್‍ನಲ್ಲಿ ಮುಂದಿನ ಮುಖ್ಯಮಂತ್ರಿ ಎಂದು ಉಲ್ಲೇಖಿಸಲಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಅವರು ರಾಮದೇವ್ ಸರ್ಕಲ್‍ನಲ್ಲಿ ಅಳವಡಿಸಿರುವ ಬ್ಯಾನರ್‍ನಲ್ಲಿ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಉಲ್ಲೇಖಿಸಲಾಗಿದೆ.

ಇಂದು ಡಿ.ಕೆ.ಶಿವಕುಮಾರ್ ಮನೆಯ ಬಳಿ ಉಡುಗೊರೆಯಾಗಿ ನೀಡಲಾದ ದೊಡ್ಡ ಗಾತ್ರದ ಭಾವಚಿತ್ರದಲ್ಲೂ ಮುಂದಿನ ಮುಖ್ಯಮಂತ್ರಿ ಎಂದು ನಮೂದಿಸಲಾಗಿತ್ತು. ಅದನ್ನು ಕಂಡೂ ಕಾಣದಂತೆ ಡಿ.ಕೆ.ಶಿವಕುಮಾರ್ ಜಾಣ ನಡೆ ಅನುಸರಿಸಿದರು.

 

Tags:
error: Content is protected !!