ಮೈಸೂರು: ದುಷ್ಕರ್ಮಿಯೊಬ್ಬ ತಾನು ಸಿಬಿಐ ಅಧಿಕಾರಿ ನಿಮ್ಮನ್ನು ಅರೆಸ್ಟ್ ಮಾಡುತ್ತೇನೆ ಎಂದು ಹೆದರಿಸಿ ವೃದ್ಧನ ಬಳಿ 7 ಲಕ್ಷ ಹಣ ಪೀಕಿದ ಘಟನೆ ಮೈಸೂರಿನಲ್ಲಿ ಬನ್ನಿಮಂಟಪದ ಬಳಿ ನಡೆದಿದೆ.
ಬನ್ನಿಮಂಟಪ ಲೇಔಟ್ ನಿವಾಸಿ ನಜರುಲ್ಲಾ ಎಂಬುವವರೇ ವಂಚನೆಗೆ ಒಳಗಾದವರಾಗಿದ್ದಾರೆ. ನಜರುಲ್ಲಾಗೆ ಫೋನ್‌ಗೆ ಕರೆ ಮಾಡಿದ ವಂಚಕ ತಾನು ಸಿಬಿಐ ಅಧಿಕಾರಿ ಎಂದು ಬೆದರಿಸಿ, ನಿಮ್ಮನ್ನು ಅರೆಸ್ಟ್ ಮಾಡುತ್ತೇನೆ ಎಂದು ಭಯ ಹುಟ್ಟಿಸಿ 7 ಲಕ್ಷ ಹಣವನ್ನು ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಈ ಸಂಬಂಧ ನಜರುಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.





