Mysore
31
few clouds

Social Media

ಶನಿವಾರ, 25 ಏಪ್ರಿಲ 2026
Light
Dark

ಹಾರ್ಮುಜ್ ಜಲಸಂಧಿ ದಾಟಿದ ಹಡಗುಗಳು ; ಅಮೆರಿಕದ ದಿಗ್ಬಂಧನಕ್ಕೆ ಇರಾನ್ ಸವಾಲು

ಟೆಹ್ರಾನ್‌ : ಅಮೆರಿಕ ಸರ್ಕಾರ ಹೇರಿದ ನೌಕಾ ದಿಗ್ಬಂಧನ ಎದುರಿಸಿ ಇರಾನ್‌ನ ಹಡಗುಗಳು ಹಾರ್ಮುಜ್ ಜಲಸಂಧಿ ದಾಟುವುದನ್ನು ಮುಂದುವರಿಸಿವೆ. ಕನಿಷ್ಠ ಎರಡು ಹಡಗುಗಳು ಯಾವುದೇ ಅಡಚಣೆ ಇಲ್ಲದೆ ಜಲಸಂಧಿ ದಾಟಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನೊಂದಿಗಿನ ಶಾಂತಿ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಇರಾನ್ ಬಂದರುಗಳಿಗೆ ಹೋಗುವ, ಬರುವ ಎಲ್ಲಾ ಹಡಗುಗಳ ಮೇಲೆ ನೌಕಾ ದಿಗ್ಬಂಧನ ಹೇರಿದ್ದಾರೆ. ಈ ದಿಗ್ಬಂಧನ ಸೋಮವಾರ ಏಪ್ರಿಲ್ 13 ಬೆಳಗ್ಗೆ 10 ಗಂಟೆಗೆ (ಯುಎಸ್ ಸಮಯ) ಜಾರಿಗೆ ಬಂದಿದೆ.

ಆದರೆ ದಿಗ್ಬಂಧನ ಜಾರಿಯಾದ ನಂತರವೂ ಅಮೆರಿಕದ ನಿರ್ಬಂಧಕ್ಕೆ ಒಳಗಾಗಿರುವ ಎಲ್ಪಿಸ್ ಮತ್ತು ರಿಚ್ ಸ್ಟಾರಿ ಎಂಬ ಇರಾನ್‌ ಟ್ಯಾಂಕರ್‌ಗಳು ಹಾರ್ಮುಜ್ ಜಲಸಂಧಿ ದಾಟಿವೆ. ಚೀನಾ ಸಂಬಂಧಿತ ರಿಚ್ ಸ್ಟಾರಿ ಹಡಗು ಅಮೆರಿಕದ ನಿರ್ಬಂಧ ಪಟ್ಟಿಯಲ್ಲಿದ್ದರೂ ಯಾವುದೇ ಅಡಚಣೆ ಇಲ್ಲದೆ ಜಲಸಂಧಿ ದಾಟಿದೆ ಎಂದು ವರದಿಯಾಗಿದೆ.

Tags:
error: Content is protected !!