ಮೈಸೂರು: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳ ಮುಗಿಸಿ ವಾಪಸ್ ಬರುವಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೈಸೂರಿನ ಇಬ್ಬರು ಯುವಕರ ಅಂತ್ಯಕ್ರಿಯೆ ಪ್ರಯಾಗ್ ರಾಜ್ ಸಮೀಪದಲ್ಲೇ ನೆರವೇರಿದೆ.
ಮೃತದೇಹಗಳನ್ನು ಮೈಸೂರಿಗೆ ತರಲು ಅಸಾಧ್ಯವಾದ ಹಿನ್ನೆಲೆಯಲ್ಲಿ ರಾಮಕೃಷ್ಣ ಶರ್ಮಾ ಹಾಗೂ ಅರುಣ್ ಶಾಸ್ತ್ರಿ ಅವರ ಅಂತ್ಯಕ್ರಿಯೆಯನ್ನು ಮಿರ್ಜಾಪುರದ ಘಾಟ್ ಸಮೀಪವೇ ಕುಟುಂಬಸ್ಥರು ನೆರವೇರಿಸಿದ್ದಾರೆ.
ಇಂದು ಕಾಶಿಯಲ್ಲಿ ಅಸ್ತಿ ವಿಸರ್ಜಿಸಿ ವಾಪಸ್ ಬರಲು ಕುಟುಂಬಸ್ಥರು ತೀರ್ಮಾನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.