Mysore
14
clear sky

Social Media

ಶುಕ್ರವಾರ, 23 ಜನವರಿ 2026
Light
Dark

ನವೆಂಬರ್.06ಕ್ಕೆ ಬರಲಿದೆ ಉಪೇಂದ್ರ, ರಮ್ಯಾ ಅಭಿನಯದ ‘ರಕ್ತ ಕಾಶ್ಮೀರ’

ಕೆಲವು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ಉಪೇಂದ್ರ ಮತ್ತು ರಮ್ಯಾ ಅಭಿನಯದ ‘ಭೀಮೂಸ್‍ ಬ್ಯಾಂಗ್‍ ಬ್ಯಾಂಗ್ ‍ಕಿಡ್ಸ್’ ಈಗ ‘ರಕ್ತ ಕಾಶ್ಮೀರ’ ಎಂಬ ಹೊಸ ಹೆಸರಿನಲ್ಲಿ ಬಿಡುಗಡೆಯಾಗುತ್ತಿರುವ ವಿಷಯ ಗೊತ್ತೇ ಇದೆ. ಚಿತ್ರವನ್ನು ನವೆಂಬರ್.06ರಂದು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ.

MDM ಪ್ರೊಡಕ್ಷನ್ ಲಾಂಛನದಲ್ಲಿ ’ರಕ್ತ ಕಾಶ್ಮೀರ’ ನಿರ್ಮಾಣವಾಗಿದ್ದು, ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ನವೆಂಬರ್ 06ರಂದು ಬಿಡುಗಡೆ ಮಾಡುವುದಕ್ಕೆ ಬಾಬು ಮುಂದಾಗಿದ್ದು, ಸದ್ಯದಲ್ಲೇ ಈ ಕುರಿತು ಅಧಿಕೃತ ಘೋಷಣೆ ಆಗಲಿದೆ.

2007ರಲ್ಲಿ ಎಸ್‍.ವಿ. ರಾಜೇಂದ್ರ ಸಿಂಗ್‍ ಬಾಬು ನಿರ್ದೇಶನದಲ್ಲಿ ಉಪೇಂದ್ರ ಮತ್ತು ರಮ್ಯಾ ಅಭಿನಯದಲ್ಲಿ ‘ಭೀಮೂಸ್‍ ಬ್ಯಾಂಗ್‍ ಬ್ಯಾಂಗ್‍ ಕಿಡ್ಸ್’ ಎಂಬ ಚಿತ್ರ ಪ್ರಾರಂಭವಾಗಿತ್ತು. ಚಿತ್ರೀಕರಣ ಮುಗಿದರೂ, ಕಾರಣಾಂತರಗಳಿಂದ ಚಿತ್ರ ಬಿಡುಗಡೆಯಾಗಿರಲಿಲ್ಲ. ಈಗ ಅದೇ ಚಿತ್ರವು 17 ವರ್ಷಗಳ ನಂತರ ಹೊಸ ಹೆಸರಿನೊಂದಿಗೆ ಮತ್ತು ಒಂದಿಷ್ಟು ಬದಲಾವಣೆಗಳೊಂದಿಗೆ ಬಿಡುಗಡೆಯಾಗುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಪ್ರಧಾನಿ ಮೋದಿ ಅವರ ಹೇಳಿಕೆಯ ಸುತ್ತ ಈ ಚಿತ್ರ ಸುತ್ತುದಂತೆ.

ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರೆ ‘ರಕ್ತ ಕಾಶ್ಮೀರ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎಂ.ಎಸ್ ರಮೇಶ್ ಸಂಭಾಷಣೆ ಮತ್ತು ಗುರುಕಿರಣ್ ಸಂಗೀತ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಉಪೇಂದ್ರ, ರಮ್ಯ, ಪಾರ್ವತಿ ಮಿಲ್ಟನ್, ದೊಡ್ಡಣ್ಣ, ಓಂಪ್ರಕಾಶ್ ರಾವ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನು, ಈ ಚಿತ್ರಕ್ಕಾಗಿ ವಿಶೇಷ ಹಾಡೊಂದನ್ನು ಚಿತ್ರೀಕರಣ ಮಾಡಲಾಗಿದ್ದು, ಈ ಹಾಡಿನಲ್ಲಿ ಡಾ. ವಿಷ್ಣುವರ್ಧನ್‍, ಅಂಬರೀಶ್‍, ಶಿವರಾಜಕುಮಾರ್, ಪುನೀತ್‍ ರಾಜಕುಮಾರ್, ಜಗ್ಗೇಶ್‍, ರಮೇಶ್‍ ಅರವಿಂದ್‍, ದರ್ಶನ್‍, ಆದಿತ್ಯ ಮುಂತಾದವರು ಕಾಣಿಸಿಕೊಂಡಿರುವುದು ವಿಶೇಷ.

Tags:
error: Content is protected !!