Mysore
24
broken clouds

Social Media

ಬುಧವಾರ, 12 ಆಗಸ್ಟ್ 2026
Light
Dark

ಓದುಗರ ಪತ್ರ | ಬೀದಿನಾಯಿಗಳ ಹಾವಳಿ ನಿಯಂತ್ರಿಸಿ

dgp murder case

ಮೈಸೂರಿನ ಜೆ.ಪಿ.ನಗರದ ಸಾಯಿಬಾಬಾ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ರಾತ್ರಿಯ ಹೊತ್ತಿನಲ್ಲಿ ಒಂದೇ ಸಮನೆ ಬೊಗಳುತ್ತಿರುತ್ತವೆ. ದ್ವಿಚಕ್ರವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗುತ್ತವೆ.

ಇನ್ನು ವಾಯುವಿಹಾರಿಗಳಿಗೂ ಇದರಿಂದ ಬಹಳ ತೊಂದರೆಯಾಗುತ್ತಿದೆ. ಮನೆಗಳ ಮುಂಭಾಗ ನಿಲ್ಲಿಸಿರುವ ದ್ವಿಚಕ್ರವಾಹನಗಳ ಸೀಟ್‌ಗಳನ್ನು ಕಚ್ಚಿಹಾಕಿರುವ ಪ್ರಕರಣಗಳು ಇವೆ.

ಪ್ರಸ್ತುತ ಪರೀಕ್ಷೆಗಳು ಮುಗಿದು ರಜೆ ಬಂದಿರುವುದರಿಂದ ಮಕ್ಕಳು ಬೀದಿಯಲ್ಲಿ ಆಟವಾಡುತ್ತಿರುತ್ತಾರೆ. ಈ ಸಮಯದಲ್ಲಿ ಬೀದಿ ನಾಯಿಗಳಿಂದ ಅನಾಹುತಗಳು ಸಂಭವಿಸುವ ಸಾಧ್ಯತೆಗಳಿವೆ. ಒಟ್ಟಾರೆ ನಾಯಿಗಳ ಹಾವಳಿಯಿಂದಾಗಿ ನಿವಾಸಿಗಳು ನಿರ್ಭೀತಿಯಿಂದ ಬೀದಿಯಲ್ಲಿ ಸಂಚರಿಸಲು ತೊಂದರೆಯಾಗುತ್ತಿದೆ. ಆದ ಕಾರಣ ಸಂಬಂಧಪಟ್ಟ ನಗರಪಾಲಿಕೆ ಅಧಿಕಾರಿಗಳು ಇತ್ತ ಗಮನಹರಿಸಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕಾಗಿದೆ.
– ಕೆ.ಎನ್.ಅಶ್ವತ್ಥನಾರಾಯಣ, ಜೆ.ಪಿ.ನಗರ, ಮೈಸೂರು

Tags:
error: Content is protected !!