Mysore
28
broken clouds

Social Media

ಗುರುವಾರ, 01 ಅಕ್ಟೋಬರ್ 2026
Light
Dark

ಓದುಗರ ಪತ್ರ: ಸಾಧಕರಿಗೆ ಸಂದ ಗೌರವ

ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಷ್ಟ್ರಕವಿ ಕುವೆಂಪು ಅವರು ನೀಡಿರುವ ಅಪಾರ ಕೊಡುಗೆಯ ಸ್ಮರಣಾರ್ಥ ಹಾಗೂ ಅವರ ಪರಿಕಲ್ಪನೆಯ ಮಾನಸಗಂಗೋತ್ರಿಯಲ್ಲಿ ಇರುವ ಬಯಲು ರಂಗಮಂದಿರಕ್ಕೆ, ಕುವೆಂಪು ಬಯಲು ರಂಗಮಂದಿರ ಎಂದು ಮರುನಾಮಕರಣ ಮಾಡಿರುವುದು ಶ್ಲಾಘನೀಯ ಕಾರ್ಯ.

ವಿವಿಧ ಸಾಹಿತ್ಯ ಸಂಘಟನೆಗಳ ಮನವಿ ಮೇರೆಗೆ ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯ ತೀರ್ಮಾನದಂತೆ ವಿವಿಯ ಎಲ್ಲ ವಿಭಾಗಗಳಲ್ಲಿ ಮತ್ತು ಕಾಲೇಜುಗಳಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರದ ಕೆಳಗೆ ‘ಫೌಂಡರ್ ಆಫ್ ಮೈಸೂರು ಯೂನಿವರ್ಸಿಟಿ’ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರದ ಕೆಳಗೆ ‘ಫೌಂಡರ್ ಆಫ್ ಮಾನಸ ಗಂಗೋತ್ರಿ ಕ್ಯಾಂಪಸ್’ ಎಂಬ ಟ್ಯಾಗ್ ಲೈನ್ ಇರುವ ಇಬ್ಬರ ಭಾವಚಿತ್ರಗಳನ್ನೂ ಅಳವಡಿಸಿರುವುದು ಮೆಚ್ಚುವಂತಹದ್ದು. ಗಾನಕೋಗಿಲೆ ಎಸ್.ಜಾನಕಿ ಅವರ ಹೆಸರನ್ನು ಲಲಿತಕಲಾ ಕಾಲೇಜಿನ ಆಡಿಟೋರಿಯಂಗೆ ಇಟ್ಟಿರುವುದೂ ಅವರ ಗಾಯನ ಕೊಡುಗೆಗೆ ತಂದ ಗೌರವವಾಗಿದೆ.

-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು

Tags:
error: Content is protected !!