ರಾಮ್‍ಕುಮಾರ್ ಮಗ ಧೀರೇನ್ ರಾಮ್‍ಕುಮಾರ್ ಅಭಿನಯದ ‘ಪಬ್ಬಾರ್’ ಎಂಬ ಚಿತ್ರ ಕೆಲವು ದಿನಗಳ ಹಿಂದೆ ಪ್ರಾರಂಭವಾಗಿತ್ತು. ಈ ಚಿತ್ರವನ್ನು ಶಿವರಾಜಕುಮಾರ್ ಮತ್ತು ಗೀತಾ ಶಿವರಾಜಕುಮಾರ್ ನಿರ್ಮಿಸುತ್ತಿದ್ದು, ಚಿತ್ರದ ಚಿತ್ರೀಕರಣ ಪ್ರಗತಿಯಲ್ಲಿದೆ.
ಅದಕ್ಕೂ ಮೊದಲೇ, ಧೀರೇನ್ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ‘X&Y’ ಚಿತ್ರದ ನಂತರ ‘ರಾಮಾ ರಾಮಾ ರೇ’ ಖ್ಯಾತಿಯ ನಿರ್ದೇಶಕ ಡಿ. ಸತ್ಯ ಪ್ರಕಾಶ್ ಹೊಸ ಚಿತ್ರದೊಂದಿಗೆ ಘೋಷಿದ್ದಾರೆ. ಈ ಬಾರಿ ಅವರು ರಾಮ್‍ಕುಮಾರ್ ಮಗ ಧೀರೇನ್ ಜೊತೆಗೆ ಹೊಸ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದು, ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಈ ಚಿತ್ರವನ್ನು ಆರ್.ವಿ ಮಲ್ಟಿ ಸಿನಿಸ್ ಕ್ರಿಯೇಟರ್ಸ್ ಸಂಸ್ಥೆಯು ನಿರ್ಮಿಸುತ್ತಿದ್ದು, ದೀಪಾವಳಿ ಪ್ರಯುಕ್ತ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ.
ಇದನ್ನು ಓದಿ: ಕಮ್ಯುನಿಸ್ಟ್ ನಾಯಕ ‘ಗುಮ್ಮಡಿ ನರಸಯ್ಯ’ನಾದ ಶಿವರಾಜಕುಮಾರ್
ದೀಪಾವಳಿ ಪ್ರಯುಕ್ತ ಶಿವರಾಜಕುಮಾರ್ ಮತ್ತು ಗೀತಾ ಶಿವರಾಜಕುಮಾರ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ಪಬ್ಬಾರ್’ ಚಿತ್ರೀಕರಣ ಸಂಪೂರ್ಣವಾದ ನಂತರ ಹೊಸ ಚಿತ್ರ ಪ್ರಾರಂಭವಾಗುವ ಸಾಧ್ಯತೆ ಇದೆ.
ಸದ್ಯಕ್ಕೆ ಚಿತ್ರಕ್ಕೆ ಪ್ರೊಡಕ್ಷನ್ ನಂಬರ್ 1 ಎಂದು ಕರೆಯಲಾಗುತ್ತಿದ್ದು, ಸದ್ಯದಲ್ಲೇ ಚಿತ್ರದ ಹೆಸರು ಅಧಿಕೃತವಾಗಿ ಘೋಷಣೆಯಾಗಲಿದೆ. ಕಲಾವಿದರು, ತಂತ್ರಜ್ಞರ ಪಟ್ಟಿ ಸಹ ಹೊರಬೀಳಲಿದೆ.





