Mysore
30
few clouds

Social Media

ಮಂಗಳವಾರ, 27 ಜನವರಿ 2026
Light
Dark

ನಿಜಜೀವನದ ಪ್ರೇಮಿಗಳಿಂದ ಬಿಡುಗಡೆಯಾಯ್ತು ‘ಜೈ’ ಚಿತ್ರದ ಪ್ರೇಮಗೀತೆ

ಪ್ರೀತಿಯ ಹಾಡಾದ್ದರಿಂದ, ಅದನ್ನು ವಿಶೇಷವಾಗಿ ಬಿಡುಗಡೆ ಮಾಡಬೇಕು, ಸಾಧ್ಯವಾದರೆ ನಿಜಜೀವನದ ಪ್ರೇಮಿಗಳಿಂದ ಬಿಡುಗಡೆ ಮಾಡಿಸಬೇಕು ಎಂಬುದು ರೂಪೇಶ್‍ ಶೆಟ್ಟಿ ಆಸೆ ಆಗಿತ್ತಂತೆ. ಅದರಂತೆ ಅವರು ಗುರುಕಿರಣ್‍, ನಿರಂಜನ್ ದೇಶಪಾಂಡೆ, ವಿನಯ್ ಗೌಡ, ರೂಪೇಶ್ ರಾಜಣ್ಣ ಮತ್ತು ಆರ್ಯವರ್ಧನ್ ಗುರೂಜಿ ದಂಪತಿಗಳಿಗೆ ಹಾಡು ಬಿಡುಗಡೆ ಮಾಡಿಕೊಡಲು ಮನವಿ ಮಾಡಿದ್ದಾರೆ. ರೂಪೇಶ್‍ ಮನವಿಗೆ ಪುರಸ್ಕರಿಸಿದ ಈ ಐದು ದಂಪತಿಗಳು ಹಾಡು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ರೂಪೇಶ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಜೈ’ ಚಿತ್ರದ ಬಿಡುಗಡೆಗೆ ಇನ್ನೊಂದು ತಿಂಗಳು ಮಾತ್ರ ಬಾಕಿ ಇದೆ. ಈ ಮೊದಲು ಚಿತ್ರದ ಒಂದು ಹಾಡನ್ನು ಕೆಲವು ದಿನಗಳ ಹಿಂದೆ ಶ್ರೀಮುರಳಿ ಬಿಡುಗಡೆ ಮಾಡಿದ್ದರು. ಇದೀಗ ‘ಲವ್‍’ ಎಂಬ ಪ್ರೇಮಮಯ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಈ ಹಾಡನ್ನು ರಜತ್‍ ಹೆಗ್ಡೆ ಹಾಡಿದ್ದಾರೆ.

ಇದನ್ನು ಓದಿ: ʼಕಾಟನ್‌ ಕ್ಯಾಂಡಿʼ ಸಾಂಗ್‌ ವಿವಾದ: ಕಾನೂನು ಸಮರಕ್ಕೆ ಸಿದ್ಧ ಎಂದ ರ‍್ಯಾಪರ್ ಚಂದನ್‌ ಶೆಟ್ಟಿ

‘ಜೈ’ ಚಿತ್ರವು ಕನ್ನಡ ಮತ್ತು ತುಳುವಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಹಾಡಿಗೆ ತುಳು ಭಾಷೆಯಲ್ಲಿ ರೂಪೇಶ್ ಶೆಟ್ಟಿ ಸಾಹಿತ್ಯ ಬರೆದಿದ್ದು, ಕನ್ನಡದಲ್ಲಿ ಕೀರ್ತನ್ ಭಂಡಾರಿ ಅವರು ಬರೆದಿದ್ದಾರೆ. ಹಾಗಂತ ಇದು ತರ್ಜುಮೆ ಅಲ್ಲವಂತೆ. ‘ಹಾಡಿನ ವಿಚಾರಧಾರೆಯನ್ನು ಮುಂದಿಟ್ಟುಕೊಂಡು, ಆ ಭಾವನೆ, ಆ ಅರ್ಥವನ್ನು ಇ ಹಾಡಿನಲ್ಲಿ ಕಟ್ಟಿಕೊಡಲಾಗಿದೆ.

‘ಜೈ’ ಚಿತ್ರದಲ್ಲಿ ರೂಪೇಶ್ ಶೆಟ್ಟಿಗೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ನಟಿಸಿದ್ದು, ಇದು ಅದ್ವಿತಿ ಅಭಿನಯದ ಮೊದಲ ತುಳು ಚಿತ್ರ. ಈ ಚಿತ್ರದಲ್ಲಿ ಅದ್ವಿತಿ, ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರೂಪೇಶ್‍ ಮತ್ತು ಅದ್ವಿತಿ ಜೊತೆಗೆ ಸುನೀಲ್‍ ಶೆಟ್ಟಿ, ನವೀನ್ ‍ಪಡೀಲ್‍ ಮುಂತಾದವರು ನಟಿಸಿದ್ದಾರೆ. ಆರ್.ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಈ ಚಿತ್ರವನ್ನು ನಿರ್ಮಿಸಿದ್ದಾರೆ.

Tags:
error: Content is protected !!