Mysore
21
overcast clouds

Social Media

ಶನಿವಾರ, 15 ಆಗಸ್ಟ್ 2026
Light
Dark

ಮುಕ್ತಾಯ ಹಂತಕ್ಕೆ ತಲುಪಿದ ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ

ಬೆಂಗಳೂರು: ಉದ್ಯಮಿ ಸಿಜೆ ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಮುಂದಿನ ವಾರದಲ್ಲಿ ತನಿಖಾ ತಂಡ ತನಿಖೆಯ ವರದಿ ನೀಡಲಿದೆ.

ರಾಯ್‌ ಆತ್ಮಹತ್ಯೆ ಸಂಬಂಧ ಈವರೆಗೂ ಅಧಿಕಾರಿಗಳು ನಾಲ್ಕು ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ರಾಯ್‌ ಆತ್ಮಹತ್ಯೆ ಮಾಡಿಕೊಂಡ ಜಾಗದ ಹಲವು ಬಗೆಯ ಸ್ಯಾಂಪಲ್‌ಗಳನ್ನು ಕಲೆಕ್ಟ್‌ ಮಾಡಿ ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದರು.

ಈಗ ಅದರ ರಿಪೋರ್ಟ್‌ ಕೂಡ ಬಂದಿದೆ. ಅದರ ಜೊತೆಗೆ ಕುಟುಂಬಸ್ಥರ ಹೇಳಿಕೆ, ಐಟಿ ಅಧಿಕಾರಿಗಳ ಹೇಳಿಕೆ, ರಾಯ್‌ ಆಪ್ತರ ಹೇಳಿಕೆ, ಖಾಸಗಿ ಮತ್ತು ವ್ಯವಹಾರಿಕ ಸಂಬಂಧ ಕೂಲಂಕುಷವಾಗಿ ತನಿಖೆ ನಡೆಸಿ ವರದಿ ಸಿದ್ದಪಡಿಸಿದ್ದಾರೆ.

 

Tags:
error: Content is protected !!