Mysore
21
overcast clouds

Social Media

ಶನಿವಾರ, 15 ಆಗಸ್ಟ್ 2026
Light
Dark

ಓದುಗರ ಪತ್ರ: ಈ ಬಾರಿಯ ದಸರಾ ಉದ್ಘಾಟನೆಗೆ ಹೆಚ್.ಡಿ.ದೇವೇಗೌಡರನ್ನು ಆಯ್ಕೆಮಾಡಲಿ

ಪ್ರತಿ ವರ್ಷ ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಬಹು ವಿಜೃಂಭಣೆಯಿಂದ ಮೈಸೂರಿನಲ್ಲಿ ಹತ್ತು ದಿನಗಳ ಕಾಲ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ ಮೊದಲನೇ ದಿನ ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಗಣ್ಯ ವ್ಯಕ್ತಿಗಳು ತಾಯಿ ಚಾಮುಂಡೇಶ್ವರಿ ಪೂಜೆ ಸಲ್ಲಿಸುವ ಮೂಲಕ ಉದ್ಘಾಟನೆ ಮಾಡಿಸುವ ಸಂಪ್ರದಾಯ ರೂಢಿಗೆ ಬಂದಿದೆ.

ಈ ಬಾರಿಯ ದಸರಾ ಉದ್ಘಾಟನೆಯನ್ನು ಹಿರಿಯ ರಾಜಕೀಯ ಧುರೀಣರೂ, ಮಾಜಿ ಪ್ರಧಾನಿಯೂ ಆದ ಹೆಚ್.ಡಿ. ದೇವೇಗೌಡ ಅವರಿಂದ ಮಾಡಿಸಿದರೆ ಸೂಕ್ತವಾಗಿರುತ್ತದೆ. ಹೇಮಾವತಿ ಅಣೆಕಟ್ಟೆಯನ್ನು ನಿರ್ಮಿಸುವಲ್ಲಿ ಗೌಡರು ಪ್ರಮುಖ ಪಾತ್ರ ವಹಿಸಿ ಬರಡು ಭೂಮಿಗೆ ನೀರು ಹರಿಸಿದರು ಹಾಗೆಯೇ ಆಲಮಟ್ಟ ಅಣೆಕಟ್ಟೆ ಎತ್ತರಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು. ನೀರಾವರಿ ಬಗ್ಗೆ ,ರೈತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಅಭಿಮಾನಿಗಳಲ್ಲಿ ‘ಮಣ್ಣಿನ ಮಗ’ ಎಂದೂ ಕರೆಸಿಕೊಂಡಿದ್ದಾರೆ.

೧೯೮೩ರಲ್ಲಿ ಕಾಂಗ್ರೆಸ್ಸೇತರ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ರಾಮಕೃಷ್ಣ ಹೆಗಡೆ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದವರು.  ಹಾಗೆಯೇ ೧೯೯೪ ರಲ್ಲಿ ಮುಖ್ಯಮಂತ್ರಿ ಆಗಿ ನಂತರ ೧೯೯೬ರಲ್ಲಿ ಕೇಂದ್ರದಲ್ಲಿ ಅತಂತ್ರ ಲೋಕಸಭೆ ರಚನೆಯಾದಾಗ ಪ್ರಧಾನಿ ಹುದ್ದೆ ಅಲಂಕರಿಸಿ, ಕರ್ನಾಟಕದ ಮೂದಲ ಪ್ರದಾನಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಾರ್ವಜನಿಕ ಕ್ಷೇತ್ರದಲ್ಲಿ ಈಗಲೂ ಸಕ್ರಿಯರಾಗಿರುವ ಈ ಹಿರಿಯ ರಾಜಕೀಯ ಮುತ್ಸದ್ದಿಯನ್ನು ರಾಜ್ಯ ಸರ್ಕಾರ ೨೦೨೬ ನೇ ಸಾಲಿನ ದಸರಾ ಉದ್ಘಾಟರಾಗಿ ಆಯ್ಕೆ ಮಾಡಿದರೆ ಒಳ್ಳೆಯದು. ಚಾಣಾಕ್ಷ ರಾಜಕಾರಣಿ, ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೇವೇಗೌಡರ ಆಯ್ಕೆಯನ್ನು ಘೋಷಿಸಲಿ.

-ಸಿದ್ದಲಿಂಗೆಗೌಡ, ಹೈರಿಗೆ ಗ್ರಾಮ, ಹೆಚ್. ಡಿ. ಕೋಟೆ ತಾಲ್ಲೂಕು

Tags:
error: Content is protected !!