Mysore
14
scattered clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಶಿವರಾಜಕುಮಾರ್‌, ಧನಂಜಯ್‍ ಹೊಸ ಚಿತ್ರಕ್ಕೆ ಹೇಮಂತ್ ರಾವ್ ನಿರ್ದೇಶನ

ಧನಂಜಯ್‍ ಅಭಿನಯದಲ್ಲಿ ಹೇಮಂತ್‍ ರಾವ್‍ ಒಂದು ಚಿತ್ರ ನಿರ್ದೇಶಿಸುವ ಸಾಧ್ಯತೆ ಇದೆ, ಅದರಲ್ಲಿ ಶಿವರಾಜಕುಮಾರ್‌ ಸಹ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿಯೊಂದು ಕೆಲವು ದಿನಗಳ ಹಿಂದೆ ಕೇಳಿ ಬಂದಿತ್ತು. ಅದು ನಿಜವಾಗಿದೆ. ಗುರುವಾರ ಚಿತ್ರದ ಘೋಷಣೆಯಾಗಿದ್ದು, ಚಿತ್ರಕ್ಕೆ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಎಂದು ಹೆಸರಿಡಲಾಗಿದೆ.

ಈ ಚಿತ್ರವನ್ನು ಡಾ. ವೈಶಾಖ್ ಜೆ. ಗೌಡ ಅವರು ವೈಶಾಖ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರಲಿದೆ. ಹೇಮಂತ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಕೆಲಸ ಮಾಡಿದ್ದ ತಾಂತ್ರಿಕ ತಂಡವೇ ಇಲ್ಲೂ ಮುಂದುವರೆದಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆ ಹಾಗೂ ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಶಿವರಾಜಕುಮಾರ್‌ ಅಭಿನಯದಲ್ಲಿ ‘ಭೈರವನ ಕೊನೆಯ ಪಾಠ’ ಎಂಬ ಚಿತ್ರವನ್ನು ಹೇಮಂತ್‍ ನಿರ್ದೇಶಿಸಬೇಕಿತ್ತು. ಈ ಚಿತ್ರದಲ್ಲಿ ಶಿವರಾಜಕುಮಾರ್‌ ಅವರ ಮೊದಲ ನೋಟದ ಪೋಸ್ಟರ್‌ ಸಹ ಬಿಡುಗಡೆ ಆಗಿತ್ತು. ಆದರೆ, ಶಿವರಾಜಕುಮರ್‌ ಅವರ ಅನಾರೋಗ್ಯದಿಂದ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದೆ. ಅದಕ್ಕೂ ಮೊದಲು ಇನ್ನೊಂದು ಹೊಸ ಚಿತ್ರವನ್ನು ಹೇಮಂತ್‍ ಘೋಷಿಸಿದ್ದಾರೆ.

‘ಭೈರವನ ಕೊನೆಯ ಪಾಠ’ ಚಿತ್ರವನ್ನು ಡಾ. ವೈಶಾಖ್ ಜೆ. ಗೌಡ ನಿರ್ಮಿಸಬೇಕಿತ್ತು. ಅದು ಮುಂದೆ ಹೋದ ಕಾರಣ, ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರವನ್ನು ಅವರೇ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಧನಂಜಯ್ ಪ್ರಮುಖ ಪಾತ್ರ ವಹಿಸುತ್ತಿದ್ದು, ಶಿವರಾಜಕುಮಾರ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶಿವರಾಜಕುಮಾರ್‌ ಅಭಿನಯದ ಮೊದಲ ಚಿತ್ರ ‘ಆನಂದ್‍’ ಬಿಡುಗಡೆಯಾಗಿ ಗುರುವಾರಕ್ಕೆ (ಜೂನ್‍ 19) 39 ವರ್ಷ ಮುಗಿದು, 40ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಿದ್ದಾರೆ ಎಂಬ ವಿಷಯವನ್ನು ಇನ್ನಷ್ಟೇ ಹೊರಬೀಳಬೇಕಿದೆ.

ಚಿತ್ರದ ಟೈಟಲ್‌ ಅನೌನ್ಸ್‌ಮೆಂಟ್‌ ಹೀಗಿದೆ..

Tags:
error: Content is protected !!