Mysore
23
overcast clouds
Light
Dark

ಅಪಘಾತದಲ್ಲಿ ಸಾವಿಗೀಡಾದ ಮಂಡ್ಯ ಮೂಲದ ಕಿರುತೆರೆ ನಟಿ ಪವಿತ್ರಾ ಜಯರಾಂ

pavitra jayaram

ಆಂಧ್ರಪ್ರದೇಶದ ಹೈದರಾಬಾದ್‌ ಸಮೀಪ ಅಪಘಾತದಿಂದಾಗಿ ಕನ್ನಡ ಹಾಗೂ ತೆಲುಗು ಕಿರುತೆರೆಯ ಜನಪ್ರಿಯ ನಟಿ ಪವಿತ್ರಾ ಜಯರಾಂ ಸಾವಿಗೀಡಾಗಿದ್ದಾರೆ.

ಮಂಡ್ಯದ ಹನಕೆರೆ ಮೂಲದ ಪವಿತ್ರಾ ಪ್ರಯಾಣಿಸುತ್ತಿದ್ದ ಕಾರು ಮತ್ತು ಬಸ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಪವಿತ್ರಾ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಧಾರಾವಾಹಿ ಪ್ರಿಯರು ನಟಿ ಸಾವಿಗೆ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.

ಕನ್ನಡದ ರೋಬೊ ಫ್ಯಾಮಿಲಿ, ನೀಲಿ, ಜೋಕಾಲಿ ಮತ್ತು ರಾಧಾರಮಣ ಧಾರಾವಾಹಿಗಳಲ್ಲಿ ನಟಿಸಿದ್ದ ಪವಿತ್ರಾ ಜಯರಾಂ ತೆಲುಗಿನ ತ್ರಿನಯನಿ ಧಾರಾವಾಹಿ ಮೂಲಕ ತೆಲುಗು ಪ್ರೇಕ್ಷಕರ ಮನಗೆದ್ದಿದ್ದರು.