Mysore
25
overcast clouds

Social Media

ಭಾನುವಾರ, 14 ಜೂನ್ 2026
Light
Dark

ಓದುಗರ ಪತ್ರ: ವಿದ್ಯಾರ್ಥಿ ಬಸ್ ಪಾಸ್ ದೂರ ಮಿತಿ ಹೆಚ್ಚಿಸಲಿ

ಓದುಗರ ಪತ್ರ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಿಸಿದರು. ಇದೀಗ ಈ ಯೋಜನೆ ಜರಿಗೆ ಬಂದಿದೆ. ಆದರೆ ಸಾರಿಗೆ ನಿಗಮಗಳು ವಿದ್ಯಾರ್ಥಿ ಪಾಸ್ ವಿತರಿಸಲು ಹಾಲಿ ಅನುಸರಿಸುತ್ತಿರುವ ದೂರ ಮಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಪ್ರಸ್ತುತ ವಿದ್ಯಾರ್ಥಿ ಪಾಸ್‌ನಲ್ಲಿ ೬೦ ಕಿಲೋಮೀಟರ್ ದೂರದ ಮಿತಿ ಇದೆ. ಆದರೆ ಹಲವಾರು ವಿದ್ಯಾರ್ಥಿಗಳು ೧೦೦ ಕಿಮೀಗಿಂತಲೂ ಹೆಚ್ಚಿನ ದೂರದಿಂದ ಶಾಲಾ ಕಾಲೇಜುಗಳಿಗೆ ಓಡಾಡುತ್ತಾರೆ. ಅವರೆಲ್ಲ ಪ್ರತಿದಿನ ತಮ್ಮ ತಮ್ಮ ಊರುಗಳಿಂದ ಹೋಗುವಾಗ ಮತ್ತು ಬರುವಾಗ ಪಾಸ್ ನಿಗದಿಯಾಗಿರುವ ಸ್ಥಳದವರೆಗೆ ಟಿಕೆಟ್ ಪಡೆದೇ ಹೋಗಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ಆಗುತ್ತಿದೆ. ಹಾಗಾಗಿ ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿದ್ಯಾರ್ಥಿ ಪಾಸ್ ನಲ್ಲಿರುವ ೬೦ ಕಿಲೋಮೀಟರ್ ದೂರದ ಮಿತಿಯನ್ನು ೧೦೦ ಕಿಲೋಮೀಟರ್‌ಗೆ ಹೆಚ್ಚಿಸಿ ಪ್ರಸಕ್ತ ಸಾಲಿನಿಂದಲೇ ಈ ಆದೇಶ ಜಾರಿಗೊಳಿಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ.

-ಎಂ. ಪಿ. ದರ್ಶನ್ ಚಂದ್ರ, ಮುಕ್ಕಡಹಳ್ಳಿ

Tags:
error: Content is protected !!