Mysore
27
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

18 ವರ್ಷಗಳ ನಂತರ ಕನ್ನಡಕ್ಕೆ ವಾಪಸ್ಸಾದ ‘ಜಿಂಕೆ ಮರಿ’ ನಂದಿತಾ ಶ್ವೇತಾ

kichcha sudeepa supported nandita swetha Benny Movie

ಆಗಾಗ ನಂದಿತ ಶ್ವೇತಾ, ಕನ್ನಡದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಕೇಳಿಬರುತ್ತಲೇ ಇತ್ತು. ಒಂದೆರಡು ಚಿತ್ರಗಳಲ್ಲಿ ಅವರು ನಟಿಸುತ್ತಿರುವ ಸುದ್ದಿಯೂ ಕೇಳಿಬಂದಿತ್ತು. ಆದರೆ, ಕಾರಣಾಂತರಗಳಿಂದ ಆ ಚಿತ್ರಗಳು ಮುಂದುವರೆಯಲೇ ಇಲ್ಲ. ಈಗ 18 ವರ್ಷಗಳ ನಂತರ ಕನ್ನಡತಿ ನಂದಿತಾ ಶ್ವೇತಾ, ಮತ್ತೆ ಕನ್ನಡದ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ.

ಯೋಗಿ ಅಭಿನಯದ ‘ನಂದ ಲವ್ಸ್ ನಂದಿತಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಿತರಾದವರು ಶ್ವೇತಾ. ಈ ಚಿತ್ರದಲ್ಲಿ ‘ಜಿಂಕೆ ಮರೀನಾ, ನೀ ಜಿಂಕೆ ಮರೀನಾ …’ ಎಂಬ ಹಾಡಿನಲ್ಲಿ ಕಾಣಿಸಿಕೊಂಡು ‘ಜಿಂಕೆ ಮರಿ’ ಶ್ವೇತಾ ಎಂದು ಜನಪ್ರಿಯರಾದರು. ಕೊನೆಗೆ ‘ನಂದ ಲವ್ಸ್ ನಂದಿತಾ’ ಚಿತ್ರದ ಯಶಸ್ಸಿನಿಂದ ಅವರು ನಂದಿತಾ ಶ್ವೇತಾ ಎಂದೇ ಗುರುತಿಸಿಕೊಂಡರು. ಮೊದಲ ಚಿತ್ರದಲ್ಲೇ ಯಶಸ್ಸು ಕಂಡರೂ, ನಂತರದ ದಿನಗಳಲ್ಲಿ ನಂದಿತಾ ಶ್ವೇತಾ, ತೆಲುಗು, ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದರು. ಈಗ ‘ಬೆನ್ನಿ’ ಎಂಬ ಚಿತ್ರದ ಮೂಲಕ ಅವರು ಕನ್ನಡಕ್ಕೆ ವಾಪಸ್ಸಾಗುತ್ತಿದ್ದಾರೆ. ಈ ಚಿತ್ರವು ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಮೂಡಿ ಬರುತ್ತಿದೆ.

ನಂದಿತಾ ಶ್ವೇತಾ ಅವರನ್ನು ಮತ್ತೊಮ್ಮೆ ಕನ್ನಡ ಚಿತ್ರರಂಗದತ್ತ ಕರೆತಂದಿರುವುದು ‘ಹೊಂದಿಸಿ ಬರೆಯಿರಿ’ ಸಿನಿಮಾದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್‌. ‘ಬೆನ್ನಿ’ ಚಿತ್ರವನ್ನು ಅವರು ನಿರ್ದೇಶಿಸುತ್ತಿಲ್ಲ. ಬದಲಿಗೆ ನಿರ್ಮಿಸುತ್ತಿದ್ದು, ನಿರ್ದೇಶನದ ಜವಾಬ್ದಾರಿಯನ್ನು ಶ್ರೀಲೇಶ್ ಎಸ್. ನಾಯರ್‍ ಅವರಿಗೆ ವಹಿಸಿದ್ದಾರೆ. ಶ್ರೀಲೇಶ್‍ ಈ ಹಿಂದೆ ವಿನಯ್‍ ರಾಜಕುಮಾರ್‍ ಅಭಿನಯದ ‘ಪೆಪೆ’ ಚಿತ್ರವನ್ನು ನಿರ್ದೇಶನ ಮಾಡಿದ್ದು, ಈಗ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಚಿತ್ರದಲ್ಲಿ ಶ್ವೇತಾ ‘ಬೆನ್ನಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್‍ ಟೀಸರ್‌ಗೆ ಸುದೀಪ್ ಧ‍್ವನಿ ನೀಡಿದ್ದು, ಟೀಸರ್‍ ಇತ್ತೀಚೆಗೆ ಬಿಡುಗಡೆಯಾಗಿದೆ. ಇತ್ತೀಚೆಗೆ ನಂದಿತಾ ಶ್ವೇತಾ ಮತ್ತು ಚಿತ್ರತಂಡದವರು ಸುದೀಪ್‍ ಅವರನ್ನು ಭೇಟಿ ಮಾಡಿದ್ದು, ಸುದೀಪ್‍ ಚಿತ್ರಕ್ಕೆ ಧ್ವನಿ ನೀಡುವುದರ ಜೊತೆಗೆ ಶುಭ ಹಾರೈಸಿದ್ದಾರೆ. ಈ ಚಿತ್ರದಲ್ಲಿ ರಕ್ತಸಿಕ್ತ ಅವತಾರದಲ್ಲಿ ನಂದಿತಾ ಶ್ವೇತಾ ಕಾಣಿಸಿಕೊಂಡಿದ್ದಾರೆ.

ಸಂಡೇ ಸಿನಿಮಾಸ್‌ ಬ್ಯಾನರ್‌ನಡಿ ರಾಮೇನಹಳ್ಳಿ ಜಗನ್ನಾಥ್‌ ಚಿತ್ರವನ್ನು ನಿರ್ಮಿಸುತ್ತಿದ್ದು, ಸಚಿನ್‌ ಬಸ್ರೂರು ಸಂಗೀತ, ಗುರುಪ್ರಸಾದ್ ನಾರ್ನಾದ್ ಛಾಯಾಗ್ರಹಣ, ಮನು ಶೇಡ್ಗಾರ್ ಹಾಗೂ ರಂಜನ್ ನರಸಿಂಹಮೂರ್ತಿ ಸಂಕಲನ ಈ ಚಿತ್ರಕ್ಕಿದೆ.

Tags:
error: Content is protected !!